ಸೋಮವಾರಪೇಟೆ, ಜು. 23: ಕೊರೊನಾ ಸಂಬಂಧಿತ ಜಿಲ್ಲಾಡಳಿತ ವಿಧಿಸಿರುವ ನಿಯಮಗಳನ್ನು ಉಲ್ಲಂಘಿಸಿದ ಮಂದಿಗೆ ಪಟ್ಟಣದಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿದರು.
ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಪಟ್ಟಣದಲ್ಲಿ ಸುಖಾಸುಮ್ಮನೆ ಅಲೆಯುತ್ತಿದ್ದ ಮಂದಿಗೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಸೇರಿದಂತೆ ಸಿಬ್ಬಂದಿಗಳು ಲಾಠಿ ಬೀಸಿದರು.
ಪಟ್ಟಣದ ಜಂಕ್ಷನ್ಗಳಲ್ಲಿ ಬೀಡುಬಿಟ್ಟಿದ್ದ ಪೊಲೀಸರು, ಅನವಶ್ಯಕವಾಗಿ ಪಟ್ಟಣದೊಳಗೆ ಆಗಮಿಸುವವರು, ಪಟ್ಟಣದಿಂದ ಹೊರಹೋಗುತ್ತಿದ್ದ ವಾಹನಗಳ ಮಾಲೀಕರನ್ನು ತಡೆದು ಕಾನೂನು ಕ್ರಮದ ಎಚ್ಚರಿಕೆ ನೀಡಿದರು.