ಕಡಂಗ, ಜು. 23: ಕೊಟ್ಟಮುಡಿ ಎಸ್‍ಎಸ್‍ಎಫ್ ಸಂಘಟನೆಯ (ಹೆಲ್ಪ್ ಡೆಸ್ಕ್ ಮತ್ತು ಎಸ್‍ವೈಎಸ್‍ಅಲ್ ಇಸಾಬಾ) ಕಾರ್ಯಕರ್ತರು ನಾಪೆÇೀಕ್ಲು - ಮಡಿಕೇರಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ಕೊಟ್ಟಮುಡಿ ಮರ್ಕಝ್ ಮುಂಭಾಗದ ರಸ್ತೆಯಿಂದ ಜಂಕ್ಷನ್‍ವರೆಗೆ ರಸ್ತೆ ಬದಿಯ ಕಾಡುಗಳನ್ನು ಸ್ವಚ್ಛಗೊಳಿಸಿದರು. ಅದೇ ರೀತಿ ಈ ಶಾಖಾ ವತಿಯಿಂದ ಮಡಿಕೇರಿ ಕ್ವಾರಂಟೈನ್‍ನಲ್ಲಿರುವ ರೋಗಿಗಳಿಗೆ ಸಹಕಾರ ನೀಡಿದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಸ್‍ವೈಎಸ್ ಕೊಟ್ಟಮುಡಿ ಶಾಖೆ ಅಧ್ಯಕ್ಷ ಅಬ್ದುಲ್ಲಾ ಸಖಾಫಿ, ಎಸ್‍ಎಸ್‍ಎಫ್ ಮಡಿಕೇರಿ ಡಿವಿಷನ್ ಅಧ್ಯಕ್ಷ ಅಸ್ಕರ್ ಸಖಾಫಿ ಕೊಟ್ಟಮುಡಿ, ಶಾಖಾ ಅಧ್ಯಕ್ಷ ರಫೀಕ್ ಸಖಾಫಿ, ಎಸ್‍ವೈಎಸ್ ಉಪಾಧ್ಯಕ್ಷ ಸಾದುಲಿ ಪಟ್ಟೆಮಡ, ನಾಯಕರಾದ ಅಹ್ಮದ್ ಮುಸ್ಲಿಯಾರ್, ಉಮ್ಮರ್, ಮೂಸಾನ್, ಶಾಖಾ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ನಾಯಕರಾದ ಖಲೀಲ್ ಹಿಮಮಿ, ಸಲಾಉದ್ದೀನ್, ರಫೀಕ್, ಬಷೀರ್ ಮುಂತಾದ ಪ್ರಮುಖ ನಾಯಕರು ಶಾಖಾ ಸಮಿತಿ ಸದ್ಯಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.