ಮಡಿಕೇರಿ, ಜು. 23: ಅಂಚೆ ಕಚೇರಿ ಹಿಂಭಾಗದ 'ಕಚೇರಿ ಸಿಬ್ಬಂದಿ ವಸತಿ ಗೃಹ'ದ ಇಬ್ಬರು ನಿವಾಸಿಗಳಿಗೆ ಸೋಂಕು ತಗುಲಿದ್ದು, ವಸತಿ ಗೃಹವನ್ನು ಸೀಲ್ಡೌನ್ ಮಾಡಲಾಗಿದೆ. ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಕಚೇರಿಯನ್ನು 48 ಗಂಟೆಗಳ ಕಾಲ ಮುಚ್ಚಲ್ಪಟ್ಟು ಸ್ಯಾನಿಟೈಸರ್ ಮಾಡಿದ ನಂತರ ಕಚೇರಿಯನ್ನು ತೆಗೆಯಲಾಗುವುದಾಗಿ ಮಡಿಕೇರಿ ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ.