*ಗೋಣಿಕೊಪ್ಪಲು, ಜು. 22: ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಮುಖ್ಯದ್ವಾರಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಥ್ಯು ಅವರ ಅನುದಾನ ರೂ. 1.50 ಲಕ್ಷ ವೆಚ್ಚದಲ್ಲಿ ಇಂಟರ್ಲಾಕ್ ಅಳವಡಿಸಲಾಗಿದೆ.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ ಅವರ ಕೋರಿಕೆಗೆ ಸ್ಪಂದಿಸಿದ ಪ್ರಥ್ಯು, ಮಳೆಗಾಲದಲ್ಲಿ ಕೆಸರುಮಯ ವಾಗುತ್ತಿದ್ದ ಹೆಬ್ಬಾಗಿಲಿಗೆ ಇಂಟರ್ಲಾಕ್ ಅಳವಡಿಸಿ ಸಹಾಯ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಜಾರಿ ಬೀಳುವುದು ತಪ್ಪಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದರ ಜತೆಗೆ ರೂ.1.50 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ಕೂಡ ನಿರ್ಮಿಸಿಕೊಟ್ಟಿದ್ದಾರೆ. ಗ್ರಾ.ಪಂ. ಅನುದಾನ ರೂ 1ಲಕ್ಷ ವೆಚ್ಚದಲ್ಲಿಯೂ ಮತ್ತೊಂದು ಕಾಂಪೌಂಡ್ ನಿರ್ಮಿಸಲಾಗಿದೆ. ಕಾಲೇಜಿನ ಹಳೆಯ ವಿದ್ಯಾರ್ಥಿ ಯಾಗಿರುವ ಪ್ರಥ್ಯು ಹಾಗೂ ಗ್ರಾ.ಪಂ.ಯ ಸಹಕಾರಕ್ಕೆ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.