ಕುಶಾಲನಗರ, ಜು. 22: ಕುಶಾಲನಗರ ಸಮೀಪದ ಹುಲುಸೆ ಗ್ರಾಮದಿಂದ ತಾಯಿ ಮತ್ತು ಮಗು ನಾಪತ್ತೆಯಾಗಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹುಲುಸೆ ಗ್ರಾಮದ ಹೆಚ್.ಎಸ್. ಆನಂದ ಎಂಬವರ ಪತ್ನಿ ಸವಿತಾ (21) ತನ್ನ ಒಂದೂವರೆ ವರ್ಷ ಪ್ರಾಯದ ಮಗಳು ಧನ್ಯಶ್ರೀಯೊಂದಿಗೆ ಕಾಣೆಯಾಗಿರುವ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ತಾ. 17 ರಂದು ಬೆಳಿಗ್ಗೆ 5.30 ಗಂಟೆಗೆ ಸವಿತಾ ಪುತ್ರಿಯೊಂದಿಗೆ ಸಮೀಪದ ಬಸ್ ತಂಗುದಾಣಕ್ಕೆ ತೆರಳಿದ ಬಗ್ಗೆ ಆನಂದ ಅವರ ತಾಯಿ ಮಾಹಿತಿ ನೀಡಿದ್ದಾರೆ. ಬಸ್ ತಂಗುದಾಣಕ್ಕೆ ತೆರಳಿ ಪರಿಶೀಲಿಸಿದಾಗ ತಾಯಿ ಮತ್ತು ಮಗು ನಾಪತ್ತೆಯಾಗಿದ್ದು ಎಲ್ಲೆಡೆ ಹುಡುಕಿದರೂ ಇದುವರೆಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾಣೆಯಾದ ತಾಯಿ ಮತ್ತು ಮಗುವಿನ ಸುಳಿವು ದೊರೆತಲ್ಲಿ ಕುಶಾಲನಗರ ಪೊಲೀಸ್ ಠಾಣೆಗೆ ಅಥವಾ 7760891346ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.