ಮುಳ್ಳೂರು, ಜು. 22: ಕೊರೊನಾ ಪಾಸಿಟಿವ್ ಪ್ರಕರಣದ ಹಿನ್ನೆಲೆ ಗೋಪಾಲ ಪುರ ವ್ಯಾಪ್ತಿಯ ಒಡೆಯನಪುರ ಗ್ರಾಮದ ಬೀದಿಯೊಂದನ್ನು ಜಿಲ್ಲಾಡಳಿತ ಕಂಟೈನ್‍ಮೆಂಟ್ ವಲಯವನ್ನಾಗಿ ಘೋಷಿಸಿ ಸೀಲ್ ಡೌನ್ ಮಾಡಿದೆ. ಈ ಪ್ರದೇಶದಲ್ಲಿ ಕೂಲಿ ಕಾರ್ಮಿಕರು, ಬಡವರು ನೆಲೆಸಿದ್ದು ಸೀಲ್‍ಡೌನ್ ಗೊಂಡಿರುವುದರಿಂದ ಜನರು ಸಂಕಷ್ಟ ಪಡುತ್ತಿರುವುದನ್ನು ಮನಗಂಡ ಅನಿವಾಸಿ ಭಾರತೀಯ ಯುವಕರ ತಂಡವಾದ ಬದ್ರಿಯಾ ಗಲ್ಫ್ ಅಸೋಸಿಯೇಷನ್ ಸಂಘಟನೆಯವರು ಹಣ ಸಂಗ್ರಹಿಸಿ ಗ್ರಾಮದ ಮುಖಂಡರ ಮೂಲಕ ಪಡಿತರ ಆಹಾರ ಕಿಟ್‍ಗಳನ್ನು ಸೀಲ್‍ಡೌನ್ ನಿವಾಸಿಗಳಿಗೆ ವಿತರಣೆ ಮಾಡಿದರು. ಗ್ರಾಮದ ಹಿರಿಯರಾದ ಶೇಕಬ್ಬಾ ಹಾಜಿ, ಹಸೈನಾರ್ ಉಸ್ತಾದ್ ನೇತೃತ್ವದಲ್ಲಿ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.