ಮಡಿಕೇರಿ, ಜು. 22: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮಡಿಕೇರಿ ಶಾಖೆಯ ವತಿಯಿಂದ ನಗರ ಠಾಣಾಧಿಕಾರಿ ಅಂತಿಮ ಅವರಿಗೆ ಮಾಸ್ಕ್-ಸ್ಯಾನಿಟೈಸರ್ಗಳನ್ನು ಹಸ್ತಾಂತರಿಸಲಾಯಿತು. ಮೂರು ತಿಂಗಳುಗಳ ಕಾಲ ತಿಂಗಳಿಗೊಮ್ಮೆ ಈ ಕಾರ್ಯ ನಡೆಯಲಿದ್ದು, ಸಾರ್ವಜನಿಕರ ಬಳಕೆಗಾಗಿ ಜಿಲ್ಲಾಡಳಿತದ ಮುಖಾಂತರ ವಿತರಿಸಲು ಮಾಸ್ಕ್, ಸ್ಯಾನಿಟೈಸರ್ಗಳನ್ನು ಕೊಡುಗೆಯಾಗಿ ನೀಡುತ್ತಿರುವುದಾಗಿ ಬ್ಯಾಂಕ್ನ ಪ್ರಮುಖರು ತಿಳಿಸಿದ್ದಾರೆ. ತಾ. 20 ರಂದು ನಗರ ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ನ ರೋಹಿತ್ ಸಾಗರ್, ಓ. ನಾಗೇಂದ್ರ ಬಾಬು, ವೈ.ಟಿ. ಸೀತೆ ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.