ಕೂಡಿಗೆ, ಜು. 22: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಸನ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಭೈರಪ್ಪನಗುಡಿ ತೊರೆನೂರು ರಸ್ತೆ ದುರಸ್ತಿ ಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ತೊರೆನೂರು ಭೈರಪ್ಪನಗುಡಿ ರಸ್ತೆಯು ಸೋಮವಾರಪೇಟೆಗೆ ಹೋಗಲು ಹತ್ತಿರದ ರಸ್ತೆಯಾಗಿರುತ್ತದೆ. ಅಲ್ಲದೆ ಹಾಸನ ಜಿಲ್ಲೆಯ ಸಾರ್ವಜನಿಕರಿಗೆ ಅಳುವಾರದ ಸ್ನಾತಕೋತ್ತರ ಪದವಿ ಕೇಂದ್ರಕ್ಕೆ ಹೋಗುವ ಪ್ರಮುಖ ರಸ್ತೆಯಾಗಿರುತ್ತದೆ. ಈ ರಸ್ತೆಯು ಇದೀಗ ತೀರಾ ಹಾಳಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ತುರ್ತಾಗಿ ಗಮನ ಹರಿಸಬೇಕೇಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.