ಶನಿವಾರಸಂತೆ, ಜು. 21: ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಗುತ್ತಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್ ಸೈಕಲ್‍ಗೆ (ಕೆಎ 13 ಇಎಸ್ 4723) ಪಿಕ್‍ಅಪ್ ವಾಹನ (ಕೆಎ 12 ಬಿ 6143) ಡಿಕ್ಕಿಪಡಿಸಿರುವುದರಿಂದ ಮೋಟಾರ್ ಸೈಕಲ್ ಸವಾರನಿಗೆ ಗಾಯವಾಗಿರುವ ಘಟನೆ ಸಂಭವಿಸಿದೆ.
ಕೊಣನೂರು ಹೋಬಳಿಯ ಹೆಣ್ಣೂರು ಗ್ರಾಮದ ನಿವಾಸಿ ಯೋಗೇಶ್ ಎಂಬವರು ತನ್ನ ಮೋಟಾರ್ ಸೈಕಲಿನಲ್ಲಿ ಆಲೂರು-ಸಿದ್ದಾಪುರದ ಕಡೆಗೆ ಹೋಗುತ್ತಿರುವಾಗ ಪಿಕ್‍ಅಪ್ ಬಂದು ಮುಂಭಾಗದಿಂದ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಕೆಳಗಡೆ ಬಿದ್ದು ಸವಾರನಿಗೆ ಬಲ ಮಂಡಿ, ಹಣೆ, ಮುಖದ ಭಾಗಕ್ಕೆ ಗಾಯವಾಗಿದೆ. ಬೈಕ್ ಮುಂಭಾಗ ಜಖಂಗೊಂಡಿರುತ್ತದೆ. ಗಾಯಾಳುವನ್ನು ಹಾಸನದ ಮಂಗಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗ ನಟೇಶ್ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಠಾಣೆಯ ಹೆಡ್‍ಕಾನ್ಸ್‍ಟೇಬಲ್ ರವಿಚಂದ್ರ ಪರಿಶೀಲನೆ ಮಾಡಿ ಪಿಕ್‍ಅಪ್ ವಾಹನ ಹಾಗೂ ಮೋಟಾರ್ ಸೈಕಲನ್ನು ವಶಪಡಿಸಿಕೊಂಡು ಚಾಲಕ ವೆಂಕಟೇಶ್ ವಿರುದ್ಧ ಕಲಂ 279, 337 ಐಪಿಸಿ ರಿತ್ಯಾ ಪ್ರಕರಣ ದಾಖಲಿಸಲಾಗಿದೆ.