ಗೋಣಿಕೊಪ್ಪ ವರದಿ, ಜು. 21: ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕಚೇರಿಯಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಇಲ್ಲಿನ ಆಟೋ ಚಾಲಕರಿಗೆ ಕೊರೊನಾ ಪರೀಕ್ಷೆ ನಡೆಸಲಾಯಿತು. 20ಕ್ಕೂ ಹೆಚ್ಚು ಜನರ ಗಂಟಲ ದ್ರವ ಸಂಗ್ರಹಿಸಲಾಯಿತು. ಸಂಘದ ಅಧ್ಯಕ್ಷ ಸಿ.ಕೆ. ಬೋಪಣ್ಣ, ಪದಾಧಿಕಾರಿಗಳಾದ ಜಪ್ಪು ಸುಬ್ಬಯ್ಯ, ಜಯಾ ಪೂವಯ್ಯ ಇದ್ದರು.