ಮಡಿಕೇರಿ, ಜು. 20: ಜಿಲ್ಲೆಯಲ್ಲಿ ತಾ.20 ರಂದು ಹೊಸದಾಗಿ 7 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ ಒಟ್ಟು 281 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 201 ಮಂದಿ ಬಿಡುಗಡೆಗೊಂಡಿದ್ದಾರೆ ಹಾಗೂ 5 ಮಂದಿ ಸಾವನ್ನಪ್ಪಿದ್ದಾರೆ. 75 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ 114 ನಿಯಂತ್ರಿತ ಪ್ರದೇಶಗಳಿವೆ. ಮಡಿಕೇರಿಯ ದೇಚೂರಿನಲ್ಲಿ ಈ ಹಿಂದೆ ವರದಿಯಾಗಿದ್ದ ಪ್ರಕರಣದ ಪ್ರಾಥಮಿಕ ಸಂಪರ್ಕಗಳಾದ 41 ವರ್ಷದ ಮಹಿಳೆ, 48 ವರ್ಷದ ಪುರುಷರಿಗೆ ಸೋಂಕು ದೃಢವಾಗಿದೆ. ವೀರಾಜಪೇಟೆಯ ತೋತೇರಿಯ 70 ವರ್ಷದ ಪುರುಷ, 36 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ವೀರಾಜಪೇಟೆಯ ಕುಕ್ಲೂರಿನ 51 ವರ್ಷದ ಮಹಿಳೆ ಬೆಂಗಳೂರಿನಿಂದ ಹಿಂತಿರುಗಿದ್ದು, ಅವರಿಗೂ ಕೊರೊನಾ ‘ಪಾಸಿಟಿವ್’ ದೃಢವಾಗಿದೆ. ಕಾರುಗುಂದ ಬಳಿಯ ಕಡಿಯತ್ತೂರಿನ 24 ವರ್ಷ ವಯಸ್ಸಿನ ಪುರುಷ ಬೆಂಗಳೂರಿನಿಂದ ಹಿಂತಿರುಗಿದ್ದು ಸೋಂಕು ದೃಢಪಟ್ಟಿದೆ. ಗೋಣಿಕೊಪ್ಪದ ಜೊಡುಬಿಟ್ಟಿಯ 38 ವರ್ಷದ ಮಹಿಳೆಗೂ ಸೋಂಕು ದೃಢವಾಗಿದೆ.
ಹೊಸ ನಿಯಂತ್ರಿತ ಪ್ರದೇಶಗಳುಕುಕ್ಲೂರು, ಕಾರುಗುಂದ ಹಾಗೂ ಜೋಡುಬಿಟ್ಟಿಯಲ್ಲಿ ಹೊಸದಾಗಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ. ಬಸವನಹಳ್ಳಿಯ ನಿಯಂತ್ರಿತ ವಲಯವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.