ನಾಪೆÇೀಕ್ಲು, ಜು. 20: ನಾಪೆÇೀಕ್ಲು ಪಟ್ಟಣದ ಆಟೋ ನಿಲ್ದಾಣದ ಬಳಿ ನಾಪೆÇೀಕ್ಲು- ಪಾರಾಣೆ ಮುಖ್ಯ ರಸ್ತೆಯಲ್ಲಿ ಉಂಟಾದ ಬೃಹತ್ ಗುಂಡಿಯನ್ನು ಮಡಿಕೇರಿ ಗ್ರಾಮಾಂತರ ಪೆÇಲೀಸ್ ಠಾಣಾ ವೃತ್ತನಿರೀಕ್ಷಕ ದಿವಾಕರ್ ನೇತೃತ್ವದಲ್ಲಿ ಮುಚ್ಚಿಸಲಾಯಿತು.

ಈ ಗುಂಡಿಯ ಬಗ್ಗೆ ಹಾಗೂ ಅಪಘಾತ ಉಂಟಾಗುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ ಹಲವಾರು ಬಾರಿ ವರದಿ ಪ್ರಕಟಿಸಲಾಗಿದ್ದರೂ, ಸಂಬಂಧಿಸಿದವರು ಯಾವದೇ ಕ್ರಮಕೈಗೊಳ್ಳಲಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಇದು ಲೋಕೋಪಯೋಗಿ ರಸ್ತೆ ಎಂಬ ಕಾರಣ ನೀಡಿ ಮೌನ ವಹಿಸಿತ್ತು. ಈ ಗುಂಡಿಗೆ ಬಿದ್ದು ದ್ವಿಚಕ್ರ ವಾಹನಗಳ ಚಾಲಕರು ಕೈಕಾಲು ಮುರಿದುಕೊಂಡಿದ್ದ ಬಗ್ಗೆಯೂ ವರದಿಯಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಪೆÇಲೀಸ್ ಇಲಾಖೆ ಗುಂಡಿ ಮುಚ್ಚಿಸಿ ಮಾನವೀಯತೆ ಮೆರೆದಿದೆ.

ಈ ಸಂದರ್ಭದಲ್ಲಿ ಸಿ.ಐ ದಿವಾಕರ್ ಅವರೊಂದಿಗೆ ನಾಪೆÇೀಕ್ಲು ಠಾಣಾಧಿಕಾರಿ ಆರ್.ಕಿರಣ್, ಸಿಬ್ಬಂದಿಗಳಾದ ಹರ್ಷ, ಬಶೀರ್, ಮತ್ತಿತರರು ಇದ್ದರು.