ಮಡಿಕೇರಿ, ಜು. 20: ಇಲ್ಲಿನ ದಾಸವಾಳ ಬೀದಿಯಲ್ಲಿರುವ ಮಡಿಕಟ್ಟೆ ತಟದ ಶ್ರೀ ವೀರಭದ್ರ ಮುನೀಶ್ವರ ದೇವಾಲಯದ ಆವರಣದಲ್ಲಿ ಮಡಿವಾಳ ಸಂಘದ ಪ್ರಮುಖರು ದೇವಾಲಯ ಸಮಿತಿಯೊಂದಿಗೆ ಶ್ರಮದಾನ ನಡೆಸಿದರು. ದೇವಾಲಯ ಮಾರ್ಗದಲ್ಲಿ ಗಿಡಗಂಟಿ ತೆರವುಗೊಳಿಸಿ, ಕೆಸರುಮಯ ದಾರಿಯಲ್ಲಿ ತಿರುಗಾಡಲು ಚಪ್ಪಡಿ ಕಲ್ಲುಗಳನ್ನು ಹಾಸುವ ಮೂಲಕ ಶ್ರಮದಾನ ನಡೆಸಿದರು.