ಶನಿವಾರಸಂತೆ, ಜು. 20: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ಆತಂಕದ ನಡುವೆಯೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ರೈತರು ತುಂತುರು ಮಳೆಯ ಸಿಂಚನದ ನಡುವೆ ಗದ್ದೆಗಳಲ್ಲಿ ಭತ್ತ ನಾಟಿ ಕಾರ್ಯ ಚುರುಕುಗೊಳಿಸಿದ್ದಾರೆ. ನಗರ ಪ್ರದೇಶದಲ್ಲಿ ಉದೋಗದಲ್ಲಿದ್ದವರೂ ಕೊರೊನಾ ಭೀತಿಯಿಂದ ಮನೆಗಳಿಗೆ ಮರಳಿರುವುದರಿಂದ ಕಾರ್ಮಿಕರ ಕೊರತೆ ಕಂಡು ಬರುತ್ತಿಲ್ಲ ಗ್ರಾಮಗಳಲ್ಲಿ ರೈತರು ತಮ್ಮಷ್ಟಕ್ಕೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೋಬಳಿಯಾದ್ಯಂತ ಸುಧಾರಣ ಮಳೆಯಾಗುತ್ತಿದ್ದು ಹೊಳೆಯೂ ಹರಿಯುತ್ತಿದ್ದು ಮೋಟಾರ್ ಅಳವಡಿಸಿ ನೀರು ಹಾಯಿಸಿಕೊಂಡು ಕೆಳಕೊಡ್ಲಿ, ಬೆಸೂರು, ಬ್ಯಾಡಗೊಟ್ಟ, ಬೆಂಬಳೂರು, ಚಿಕ್ಕಾಕುಂದ, ಊರುಗುತ್ತಿ, ದೊಡ್ಡಭಂಡಾರ, ಚಿಕ್ಕಭಂಡಾರ, ಕ್ಯಾತೆ, ಶಾಂತಪುರ ಗ್ರಾಮಗಳಲ್ಲಿ ರೈತರು ಮನೆ ಮಂದಿಯೊಂದಿಗೆ ನಾಟಿ ಕೆಲಸದಲ್ಲಿ ಮಗ್ನರಾಗಿದ್ದಾರೆ.