ವೀರಾಜಪೇಟೆ, ಜು. 20: ಕುಕ್ಲೂರು ಗ್ರಾಮದಲ್ಲಿ 51 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಇಂದು ಅವರ ವಾಸದ ಮನೆಯ ಆಜುಬಾಜಿನಲ್ಲಿರುವ ಹದಿನಾರು ಕುಟುಂಬಗಳಿರುವ 60ಮಂದಿ ಜನಸಂಖ್ಯೆ ಹೊಂದಿರುವ ಗ್ರಾಮದ ಒಂದು ಭಾಗವನ್ನು ಸೀಲ್ಡೌನ್ ಮಾಡಿ ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.
ಕಳೆದ ಐದು ದಿನಗಳ ಹಿಂದೆ ಈ ವ್ಯಕ್ತಿ ಬೆಂಗಳೂರಿನಿಂದ ವೀರಾಜಪೇಟೆಗೆ ಬಂದಿದ್ದು ಕೊರೊನಾ ಆರೋಗ್ಯ ತಪಾಸಣೆಯಲ್ಲಿ ಇಂದು ಬೆಳಿಗ್ಗೆ ಪಾಸಿಟಿವ್ ಬಂದುದ್ದರಿಂದ ಸ್ಥಳಕ್ಕೆ ತೆರಳಿದ ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ಅವರು ಸೋಂಕಿತ ವ್ಯಕ್ತಿಯನ್ನು ಹೋಮ್ ಕ್ವಾರಂಟೈನ್ ಮಾಡಿ ಮನೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ವೀರಾಜಪೇಟೆ ಹೋಬಳಿ ಕಂದಾಯ ನಿರೀಕ್ಷಕರಾದ ಪಳಂಗಪ್ಪ ಪ್ರಕಾಶ್, ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬೋಜಪ್ಪ, ಆರೋಗ್ಯ ತಂಡ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಒಂದನೇ ರುದ್ರಗುಪ್ಪೆ ತೊತೇರಿಯಲ್ಲಿ ಮತ್ತೆ 2 ಕೊರೊನಾ ಸೋಂಕು ಪತ್ತೆ
ಕಳೆದ ನಾಲ್ಕು ದಿನಗಳ ಹಿಂದೆ ಒಂದನೇ ರುದ್ರಗುಪ್ಪೆಯ ಬೆಂಗಳೂರಿನಿಂದ ಬಂದಿದ್ದ ತೊತೇರಿಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿ ಸೀಲ್ಡೌನ್ ಮಾಡಲಾಗಿತ್ತು. ಇದೇ ಭಾಗದಲ್ಲಿ ಮತ್ತೆ 71 ವರ್ಷ ವಯಸ್ಸಿನವರಿಗೆ ಹಾಗೂ 35 ವರ್ಷದವರಿಗೆ ಇಂದು ಕೊರೊನಾ ಸೋಂಕು ವರದಿಯಲ್ಲಿ ದೃಢಪಟ್ಟಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದು ಈ ಇಬ್ಬರಿಗೂ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.