ಕಡಂಗ, ಜು. 20: ಕೂಡಗು ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡಗು ಆಕ್ಷನ್ ಟೀಮ್ ವತಿಯಿಂದ ಜಿಲ್ಲಾಧಿಕಾರಿಗಳು, ಪೆÇಲೀಸ್ ವರಿಷ್ಠಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರನ್ನು ಭೇಟಿ ಮಾಡಲಾಯಿತು.
ಜಿಲ್ಲೆಯಲ್ಲಿ ಯಾವುದೇ ಪ್ರಕೃತಿ ವಿಕೋಪ ಇತ್ಯಾದಿ ಸಂಭವಿಸಿದರೆ. ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಸಹಕರಿಸುವ ಭರವಸೆ ನೀಡಿ ಬಳಿಕ ಮಾಸ್ಕ್ ವಿತರಿಸಲಾಯಿತು.
ನಾಪೋಕ್ಲು ಉಪ ತಹಶೀಲ್ದಾರ್, ಮಡಿಕೇರಿ ಡಿವೈಎಸ್ಪಿ ನಗರ ಠಾಣೆ ಹಾಗೂ ಮಹಿಳಾ ಠಾಣೆ ಜೊತೆಗೆ ನಾಪೋಕ್ಲು ಠಾಣಾ ಸಿಬ್ಬಂದಿಗಳಿಗೂ ಮಾಸ್ಕ್ ವಿತರಿಸ ಲಾಯಿತು. ಈ ಸಂದರ್ಭ ಕೂಡಗು ಆಕ್ಷನ್ ಟೀಂ ಸದಸ್ಯರಾದ ಪ್ರತೀಕ್ ಪೆÇನ್ನಣ್ಣ, ವಸಂತ, ಸುಧಾಮ, ರವಿಗೌಡ, ಫೈಸಲ್, ಮೊಹ್ಸಿನ್, ಸಿದ್ದಿಕ್ ಇತರರು ಉಪಸ್ಥಿತರಿದ್ದರು.