ನಾಪೆÇೀಕು, ಜು. 20 : ಇಂದು ವಾರದ ಸಂತೆಯನ್ನು ರದ್ದು ಪಡಿಸಿದ್ದರೂ ನಗರದಲ್ಲಿ ಜನಗಳ ಜಾತ್ರೆ ಕಂಡು ಬಂದಿತು. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಲಾಕ್‍ಡೌನ್ ಇದ್ದುದರಿಂದ ಮಾಮೂಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಮತ್ತು ಕಾರ್ಮಿಕರು ನಗರದಲ್ಲಿ ಕಂಡು ಬಂದರು ಅದರೆ ಅಂತರವನ್ನು ಕಾಯ್ದುಕೊಳ್ಳವಲ್ಲಿ ವಿಫಲರಾಗಿ ಜನರು ಗುಂಪು ಗುಂಪಾಗಿ ತರಕಾರಿ ಮತ್ತಿತರ ಸಾಮಾನುಗಳನ್ನು ಕೊಳ್ಳುತ್ತಿರುವುದು ಮತ್ತು ಸ್ಥಳಿಯ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರಕ್ಕಾಗಿ ಜನರು ಅಂತರ ಕಾಯ್ದುಕೊಳ್ಳದೆ ನೂಕು ನುಗ್ಗಲು ಕಂಡು ಬಂದಿತು. ಮಾರುಕಟ್ಟೆ ಇಲ್ಲದಿರುವುದರಿಂದ ಜನರು ತರಕಾರಿ ಅಂಗಡಿಗಳಿಗೆ ಮುಗಿ ಬಿದ್ದರು. ತರಕಾರಿಯ ಬೆಲೆ ಅಧಿಕವಾಗಿದ್ದರೂ ವಿಧಿ ಇಲ್ಲದೆ ತರಕಾರಿ ಕೊಳ್ಳುತ್ತಿದ್ದರು. ಜನರಿಗಿಂತ ವಾಹನಗಳ ಸಂಖ್ಯೆ ಅಧಿಕವಾಗಿತ್ತು.