ಸುಂಟಿಕೊಪ್ಪ,ಜು.20: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಳೆದ 2 ದಿನಗಳ ಹಿಂದೆ ಸುರಿದ ಗಾಳಿ, ಮಳೆಯ ಆರ್ಭಟಕ್ಕೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯಗೊಂಡಿದೆ.
ಕಳೆದ ಒಂದು ವಾರದಿಂದ ಸುರಿದ ಭಾರೀ ಗಾಳಿ ಮಳೆಯ ಪರಿಣಾಮ ನಾÀಕೂರು ಶಿರಂಗಾಲ, ಶಾಂತಗೇರಿ, ಬೆಟ್ಟಗೇರಿ, ತೊಂಡೂರು ದಾಸನಕೆರೆ, ಕಂಬಿಬಾಣೆ ಈ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಕೆಲವು ಉಪಕರಣ ಸೇರಿದಂತೆ 2 ಟ್ರಾನ್ಸ್ ಫಾರ್ಮರ್, 18 ಕಂಬಗಳು ನೆಲಕಚ್ಚಿವೆ. ಇದರಿಂದ ಸೆಸ್ಕ್ ಇಲಾಖೆಗೆ ಅಪಾರ ನಷ್ಟ ಸಂಭವಿಸಿದೆ ಎಂದು ಸೆಸ್ಕ್ ಅಭಿಯಂತರ ಜಯದೀಪ್ ತಿಳಿಸಿದ್ದಾರೆ.
13 ಸಿಬ್ಬಂದಿಗಳು ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಕೋರಿಕೊಂಡಿದ್ದಾರೆ. ಕಾಫಿ ತೋಟದೊಳಗೆ ಹಾದು ಹೋಗಿರುವ ವಿದ್ಯುತ್ ಕಂಬಗಳ ಸಮೀಪವಿರುವ ಮರ ಮತ್ತು ರಂಬೆ ಕೊಂಬೆಗಳನ್ನು ಕಡಿಯುವಂತೆ ತೋಟದ ಮಾಲೀಕರಿಗೆ ನೋಟೀಸು ನೀಡಲಾಗಿದೆ. ತೋಟದ ಮಾಲೀಕರು ತೆರವು ಗೊಳಿಸದಿದ್ದಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು ಕಂಬಗಳು ನಾಶಗೊಂಡರೆ ತೋಟದ ಮಾಲೀಕರು ಇದರ ಸಂಪೂರ್ಣ ವೆಚ್ಚವನ್ನು ಭರಿಸಬೇಕಾಗುತ್ತದೆ. ಎಂದು ಅಭಿಯಂತರರು ತಿಳಿಸಿದ್ದಾರೆ.