ಮಡಿಕೇರಿ, ಜು. 18: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರು ಮಳೆಯು ಹೆಚ್ಚಾಗಿದ್ದು, ವೀರಾಜಪೇಟೆ ತಾಲೂಕಿನ ಬಿರುನಾಣಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನ್ೀಟ್‍ಕುಂದ್‍ನ ಸೇತುವೆಯ ಮೇಲೆ ನೀರು ಬಂದಿದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಸೇತುವೆಯ ಮೇಲೆ ಸಂಚಾರವನ್ನು ನಿಷೇಧಿಸಲಾಗಿತ್ತು. ಇದೀಗ ಸದರಿ ಭಾಗದಲ್ಲಿ ಮಳೆ ಕಡಿಮೆಯಾಗಿದ್ದು, ನ್ೀಟ್‍ಕುಂದ್ ಸೇತುವೆಯ ಕೆಳಗೆ ಸುಮಾರು ಎರಡು ಅಡಿಗೆ ನೀರು ಇಳಿದಿರುವುದರಿಂದ ಸದರಿ ಸೇತುವೆಯ ಮೇಲೆ ಸಾರ್ವಜನಿಕರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಸದರಿ ಪ್ರದೇಶಕ್ಕೆ ಬಿರುನಾಣಿಯ ಪೆÇಲೀಸ್ ಔಟ್‍ಪೆÇೀಸ್ಟ್‍ನ ಸಿಬ್ಬಂದಿಗಳು ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಅಗತ್ಯವಿದ್ದಲ್ಲಿ ಜಿಲ್ಲಾಡಳಿತದ ವತಿಯಿಂದ ಪರಿಹಾರ ಕಾರ್ಯಾಚರಣೆ ತಂಡವನ್ನು ತಕ್ಷಣವೇ ಕಳುಹಿಸಲಾಗುವುದು. ಆದ್ದರಿಂದ ಆ ಭಾಗದ ಸಾರ್ವಜನಿಕರು ಯಾವುದೇ ಭಯ ಅಥವಾ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.