ಮಡಿಕೇರಿ, ಜು. 18: ಇಲ್ಲಿನ ಇನ್ನರ್ ವೀಲ್ ಅಧ್ಯಕ್ಷೆಯಾಗಿ ದಿವ್ಯ ದಿವೀನ್ ಅಧಿಕಾರ ಸ್ವೀಕರಿಸಿದರು.ಇತ್ತೀಚೆಗೆ ನಡೆದ ಆನ್ಲೈನ್ ಸಭೆಯಲ್ಲಿ ಪೂರ್ವಾಧ್ಯಕ್ಷೆ ನಿಶಾಮೋಹನ್ ಅವರಿಂದ ಅಧಿಕಾರ ಹಸ್ತಾಂತರ ನಡೆಯಿತು. ಕೊರೊನಾ ವೈರಾಣು ಸಂದಿಗ್ಧದಲ್ಲಿ ಅನಿವಾರ್ಯವಾಗಿ ಆನ್ಲೈನ್ ಸಭೆ ನಡೆಸುತ್ತಿರುವದಾಗಿ ದಿವ್ಯ ಹೇಳಿದರು.
ಉಪಾಧ್ಯಕ್ಷೆಯಾಗಿ ಅನಿತಾ ಪೂವಯ್ಯ, ಕಾರ್ಯದರ್ಶಿಯಾಗಿ ಶ್ವೇತಾ ಪೂಣಚ್ಚ, ಸಂಪಾದಕಿಯಾಗಿ ಸಲೀಲ ಪಾಟ್ಕರ್, ಖಜಾಂಚಿಯಾಗಿ ಡಾ.ರೇಣುಕಾ ಸುಧಾಕರ್, ಜಂಟಿ ಕಾರ್ಯದರ್ಶಿಯಾಗಿ ಲಲಿತಾ ರಾಘವನ್, ನಿರ್ದೇಶಕರಾಗಿ ಸುಮಾ ತಿಮ್ಮಯ್ಯ, ಜೂಬಿ ಗಣಪತಿ, ಡಾ. ಶರ್ಲಿ ಹಾಗೂ ನಮಿತಾ ರೈ ಆಯ್ಕೆಯಾದರು.