ಸೋಮವಾರಪೇಟೆ,ಜು.19: ಸೋಮವಾರಪೇಟೆ ಪಟ್ಟಣ ಸಮೀಪದ ಕಕ್ಕೆಹೊಳೆ ಜಂಕ್ಷನ್ ಸಮೀಪ ಎರಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಕಂಟೈನ್‍ಮೆಂಟ್ ವಲಯ ನಿರ್ಮಾಣವಾಗಿದ್ದು, ತಾ. 20ರ (ಇಂದು) ಸೋಮವಾರದಂದು ನಡೆಯುವ ಸಂತೆಯನ್ನು ರದ್ದುಪಡಿಸಲಾಗಿದೆ.
ಸಂತೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದ್ದು, ಇದನ್ನೂ ಮೀರಿ ಯಾರಾದರೂ ಅಂಗಡಿ ಹಾಕಿದರೆ ಕಾನೂನು ಕ್ರಮ ಜರುಗಿಸುವದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.