ಶನಿವಾರಸಂತೆ, ಜು. 19: ಅಕ್ರಮವಾಗಿ ಜೂಜಾಡುತ್ತಿದ್ದ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಪಣಕ್ಕಿಟ್ಟಿದ್ದ ರೂ. 2,100 ನಗದು ಸೇರಿದಂತೆ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದ್ದಾರೆ.

ಗೌಡಳ್ಳಿ ಗ್ರಾಂ.ಪಂ. ವ್ಯಾಪ್ತಿಯ ನಂದಿಗುಂದ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಎಲೆಗಳಿಂದ ಹಣವನ್ನು ಪಣವಾಗಿಟ್ಟು, ಜೂಜಾಟ ನಡೆಯುತ್ತಿರುವ ಬಗ್ಗೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆ ದಾಳಿ ನಡೆಯಿತು. ಜೂಜಾಟದಲ್ಲಿ ತೊಡಗಿದ್ದ ಎನ್.ಜೆ. ಲೋಕೇಶ್, ಎನ್.ಡಿ. ವಸಂತ, ಜಿ.ಎನ್. ಮೋಹನ್, ಜಿ.ಆರ್. ಭದ್ರು, ಜಿ.ಎನ್. ಯತೀಶ್ ಅವರುಗಳನ್ನು ವಶಕ್ಕೆ ಪಡೆದು, ಠಾಣಾ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು.

ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ಹೆಚ್.ಇ. ದೇವರಾಜ್, ಹೆಡ್‍ಕಾನ್ಸ್‍ಟೇಬಲ್‍ಗಳಾದ ರವಿಚಂದ್ರ, ಲೋಕೇಶ್, ಬೋಪಣ್ಣ, ವಿವೇಕ್, ಸಿಬ್ಬಂದಿಗಳಾದ ಎಂ.ವಿ. ಶಫೀರ್, ಮುರುಳಿ, ವಿನಯ ಭಾಗವಹಿಸಿದ್ದರು.