ಸುಂಟಿಕೊಪ್ಪ,ಜು.18: ಮಾದಾಪುರ ಜಂಬೂರು ಬಾಣೆಯಲ್ಲಿ ಮಹಿಳೆಯೋರ್ವರಲ್ಲಿ ಕೋವಿಡ್-19 ಪಾಸಿಟಿವ್ ಕಂಡು ಬಂದ ಹಿನ್ನಲೆ ಪ್ರದೇಶವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಸೀಲ್‍ಡೌನ್ ಮಾಡಲಾಯಿತು.

ಜಂಬೂರು ಬಾಣೆಯ 26 ವರ್ಷದ ಮಹಿಳೆಯೋರ್ವರಿಗೆ ಸೋಂಕು ದೃಢÀಪಟ್ಟಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಜಿಲ್ಲಾ ಆರೋಗ್ಯಧಿಕಾರಿ ಮೋಹನ್, ಕಂದಾಯ ಪರಿವೀಕ್ಷಕರಾದ ಶಿವಪ್ಪ, ಗ್ರಾಮಲೆಕ್ಕಿಗೆ ಚಂದನ ಈ ಪ್ರದೇಶವನ್ನು ಸೀಲ್‍ಡೌನ್ ಮಾಡಿ ಜನರಿಗೆ ಈ ಪ್ರದೇಶಗಳಿಂದ ಹೊರ ಬಾರದಂತೆ ಹಾಗೂ ಹೊರಗಿನಿಂದ ಯಾರೂ ಒಳಬಾರದಂತೆ ಸೂಚಿಸಿ ನಿರ್ಬಂಧÀ ವಿಧಿಸಲಾಯಿತು.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು, ಗ್ರಾ.ಪಂ.ಸದಸ್ಯರು, ಆರೋಗ್ಯ ಸಿಬ್ಬಂದಿಗಳು ಹಾಗೂ ಗ್ರಾಮ ಸಹಾಯಕ ರುದ್ರಮಾಕುಮಾರ್ ಮತ್ತಿತರರು ಇದ್ದರು.