ಮಡಿಕೇರಿ, ಜು. 18: ಕಾಫಿ ಮಂಡಳಿಯ ಕಾರ್ಯದರ್ಶಿಯಾಗಿ ಇತ್ತೀಚೆಗಷ್ಟೆ ನೇಮಕವಾಗಿದ್ದ ಮೂಲತಃ ಕೊಡಗಿನವರಾಗಿದ್ದ ಅಧಿಕಾರಿ ನವೀನ್ ಕುಶಾಲಪ್ಪ ಅವರ ಹುದ್ದೆ ಮತ್ತೆ ಬದಲಾಗಿದೆ. ಇವರಿಗೆ ನೀಡಲಾಗಿದ್ದ ಅಧಿಕಾರವನ್ನು ಇದೀಗ ಹಿಂಪಡೆಯಲಾಗಿದ್ದು, ಈ ಸ್ಥಾನಕ್ಕೆ ನೂತನ ಅಧಿಕಾರಿಯಾಗಿ ಕಾಫಿ ಮಂಡಳಿಯಲ್ಲಿ ನಿರ್ದೇಶಕರಾಗಿದ್ದ ಎನ್.ಎನ್. ನರೇಂದ್ರ (ಹಣಕಾಸು ವಿಭಾಗ) ಅವರನ್ನು ನೇಮಕ ಮಾಡಲಾಗಿದೆ.

ನವೀನ್ ಕುಶಾಲಪ್ಪ ಅವರು ತಮ್ಮ ಹಿಂದಿನ ಹುದ್ದೆಯಲ್ಲಿ ಬೆಂಗಳೂರಿನಲ್ಲೇ ಮುಂದುವರಿಯಲಿದ್ದಾರೆ. ಈ ಬಗ್ಗೆ ಭಾರತ ಸರಕಾರದ ಅಧೀನ ಕಾರ್ಯದರ್ಶಿ ಮಹೇಂದರ್ ಚೌದರಿ ಹೊಸ ಆದೇಶ ಹೊರಡಿಸಿದ್ದಾರೆ.