*ಗೋಣಿಕೊಪ್ಪಲು, ಜು. 19: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಇತ್ತೀಚೆಗೆ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಾದ ಕೆ.ಬಿ ಸತ್ಯಭಾಮ, ಜಿ.ಎಲ್. ಗೌರಮ್ಮ, ಎ.ಜಿ. ಸುಜಾತ, ಎಂ.ಜಿ. ಸೌಮ್ಯ ಹಾಗೂ ವಿ.ಡಿ. ಶೃತಿ ಇವರುಗಳಿಗೆ ತಲಾ ರೂ. 3 ಸಾವಿರ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತ್ತಲ್ಲದೆ, ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್‍ಗಳನ್ನು ನೀಡಲಾಯಿತು. ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಳಮೇಂಗಡ ಎ. ವಿವೇಕ್ ಅವರು ಕೋವಿಡ್-19 ರ ಸಂದರ್ಭ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ ಎಂದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಕೆ.ಸಿ. ಮುತ್ತಪ್ಪ, ನಿರ್ದೇಶಕರುಗಳಾದ ಕೆ.ಎಸ್. ಬೋಪಣ್ಣ, ಕೆ.ಎಸ್. ಭರತ್, ಸಿ.ಬಿ. ಬೆಳ್ಳಿಯಪ್ಪ, ಕೆ.ಆರ್. ಸುರೇಶ್, ಎಂ.ಕೆ. ರವಿ, ಎಂ.ಕೆ. ಪ್ರಕಾಶ್, ಹೆಚ್.ಕೆ. ಬೊಗ್ಗುರು, ಎಂ.ಎಂ. ಜಗನ್ನಾಥ್, ಎಂ.ಎನ್. ಅಶ್ವಿನಿ, ಕೆ.ಡಿ. ನಿರ್ಮಲ, ಪಿ.ಬಿ. ಲೀನಾ, ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಮೋಹನ್, ಜಿಲ್ಲಾ ಬ್ಯಾಂಕಿನ್ ಮೇಲ್ವಿಚಾರಕ ಬಸವರಾಜು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.