ಗೋಣಿಕೊಪ್ಪ, ಜು. 18; ಕಾಡಾನೆಗಳನ್ನು ಮುಖ್ಯ ರಸ್ತೆ ದಾಟಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದು, ಕಲ್ತೋಡುವಿನ ಗುಡ್ಡಂಡ ಕಾಡು ಎಂಬಲ್ಲಿ ಸೇರಿಕೊಂಡಿವೆ. ಭಾನುವಾರ ಮತ್ತೆ ಕಾಡಿಗೆ ಅಟ್ಟಲಾಗುತ್ತದೆ. ಡಿಆರ್‍ಎಫ್‍ಒ ಉಮಾಶಂಕರ್ ಸೇರಿದಂತೆ 11 ಜನರ ತಂಡ ಕಾರ್ಯಾಚರಣೆಯಲ್ಲಿದ್ದರು.