ಶನಿವಾರಸಂತೆ, ಜು. 17: ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ಯಪೇಟೆಯಿಂದ ಕಾವೇರಿ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ವಾಸವಿರುವ ಸುಮಾರು 39 ವರ್ಷ ವಯಸ್ಸಿನ ಪುರುಷನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗೋವಿಂದ್‍ರಾಜ್, ಉಪತಹಶೀಲ್ದಾರ್ ಗೋವಿಂದ್‍ರಾಜ್, ತಾಲೂಕು ವೈದ್ಯಾಧಿಕಾರಿ, ಶನಿವಾರಸಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಗ್ರಾಮಲೆಕ್ಕಾಧಿಕಾರಿ ಮಂಜುನಾಥ್, ಠಾಣಾಧಿಕಾರಿ ದೇವರಾಜ್ ಸ್ಥಳಕ್ಕೆ ಆಗಮಿಸಿ ಸದರಿ ಸೋಂಕಿತನ ಮನೆಯ ಸುತ್ತಮುತ್ತ ನಿರ್ಬಂಧಿತ ಪ್ರದೇಶ ಎಂದು ಸೀಲ್‍ಡೌನ್ ಮಾಡಿಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಸೋಂಕಿತರ ಮನೆಯ ಸುತ್ತಮುತ್ತ ಔಷಧ ಸಿಂಪಡಿಸಲಾಯಿತು.