ಮುಳ್ಳೂರು, ಜು. 17: ಪರಿಸರ ದಿನಾಚರಣೆ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ದುಂಡಳ್ಳಿ ಕಾರ್ಯಕ್ಷೇತ್ರ ವ್ಯಾಪ್ತಿಯ ಮಾದ್ರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡನಾಟಿ ಮಾಡಲಾಯಿತು. ಶನಿವಾರಸಂತೆ ಅರಣ್ಯ ಇಲಾಖೆ ನೀಡಿದ ವಿವಿಧ ಉಪಯುಕ್ತ ಗಿಡಗಳನ್ನು ಶಾಲೆಗೆ ಸೇರಿದ ಜಾಗದಲ್ಲಿ ನಾಟಿ ಮಾಡಲಾಯಿತು.

ಗಿಡನಾಟಿ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ರಮೇಶ್, ಅರಣ್ಯ ರಕ್ಷಕರಾದ ಸತೀಶ್, ಶಿವರಾಜ್, ಶಾಲೆಯ ಮುಖ್ಯ ಶಿಕ್ಷಕ ಪುಟ್ಟರಾಜ್, ಸೇವಾ ಪ್ರತಿನಿಧಿ ಪ್ರಮೀಳ, ಎಸ್‍ಡಿಎಂಸಿ ಅಧ್ಯಕ್ಷ ಅರುಣ್‍ಕುಮಾರ್ ಮುಂತಾದವರು ಭಾಗವಹಿಸಿದ್ದರು.

-ಭಾಸ್ಕರ್ ಮುಳ್ಳೂರು