ಸಿದ್ದಾಪುರ, ಜು. 17: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಮಾದಪ್ಪ ಬಡಾವಣೆಯ ಸೀಲ್‍ಡೌನ್ ಮಾಡಲಾದ ನಿವಾಸಿಗಳಿಗೆ ಅಲ್ಲಿನ ನಿವಾಸಿ ಅಶ್ರಫ್ ಅಗತ್ಯ ವಸ್ತುಗಳ ಕಿಟ್ ನೀಡಿದರು. ಅಲ್ಲದೆ ಸಿದ್ದಾಪುರದ ತರಕಾರಿ ವ್ಯಾಪಾರಿ ಅಶ್ರಫ್ ತರಕಾರಿಗಳನ್ನು ನೀಡಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಶುಹಾದ ಹಾಗೂ ಮಾಜಿ ಸದಸ್ಯರುಗಳು ಹಾಜರಿದ್ದರು.