ಮಡಿಕೇರಿ, ಜು. 17: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 2019-20ನೇ ಸಾಲಿನ 14ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುದಾನದಲ್ಲಿ ರೂ. 13.64 ಲಕ್ಷದಲ್ಲಿ ಹೊಸ ಖಾಸಗಿ ಬಸ್ ನಿಲ್ದಾಣ ಬಳಿ, ವಿಜಯ ವಿನಾಯಕ ದೇವಾಲಯ ಹಾಗೂ ಸಂಪಿಗೆಕಟ್ಟೆ ಬಳಿ ಅಳವಡಿಸಲಾಗಿರುವ ಹೈಮಾಸ್ಟ್ ವಿದ್ಯುತ್ ದೀಪಗಳಿಗೆ ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ಈ ಸಂದರ್ಭ ಅಧಿಕಾರಿ ವರ್ಗದವರು, ಗುತ್ತಿಗೆದಾರ ಬೆಂಗಳೂರಿನ ಗಣೇಶ್ ಇನ್ನಿತರಿದ್ದರು.