ನಾಪೆÇೀಕ್ಲು, ಜು. 16 : ವಿ. ಬಾಡಗ ಗ್ರಾಮದ ಚೇಮಿರ ಪ್ರಕಾಶ್ ಎಂಬವರ ಮನೆಯ ಸಮೀಪದ ಕೊಟ್ಟಿಗೆಯಲ್ಲಿ ಹೊಂಚು ಹಾಕುತ್ತಿದ್ದ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಬಿಟ್ಟಂಗಾಲದ ಸ್ನೇಕ್ ಗಗನ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗಗನ್ ಇದುವರೆಗೆ ಸುಮಾರು 56 ಕಾಳಿಂಗ ಸರ್ಪ ಅಲ್ಲದೆ ಸುಮಾರು 6 ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟು ಹಾವುಗಳ ಜೀವ ಉಳಿಸಿದ್ದಾರೆ. ಎಲ್ಲೇ ಹಾವುಗಳು ಕಂಡು ಬಂದರೆ ಅದನ್ನು ಕೊಲ್ಲ ಬೇಡಿ ಎಂದು ಹೇಳುವ ಗಗನ್ ಹಾವುಗಳು ಕಂಡು ಬಂದರೆ ತನ್ನನ್ನು ಸಂಪರ್ಕಿಸಿ ಎಂದಿದ್ದಾರೆ. ಮೊ. 9945102695, 8277445589 ಸಂಪರ್ಕಿಸಬಹುದಾಗಿದೆ. - ದುಗ್ಗಳ