ಕುಶಾಲನಗರ, ಜು. 16: ಕಫ್ರ್ಯೂ ಉಲ್ಲಂಘಿಸಿ ಸಂಚರಿಸುತ್ತಿದ್ದವರಿಗೆ ಕುಶಾಲನಗರ ಪೆÇಲೀಸರು ಬಿಸಿ ಮುಟ್ಟಿಸಿದ ಘಟನೆ ನಡೆದಿದೆ. ಸಂಜೆ 6 ಗಂಟೆ ನಂತರವೂ ಸಂಚಾರ ಮಾಡುತ್ತಿದ್ದವರನ್ನು ಪೆÇಲೀಸರು ವಾಪಸ್ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.

ಡಿವೈಎಸ್ಪಿ ಶೈಲೇಂದ್ರ, ವೃತ್ತನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಕುಶಾಲನಗರ-ಕೊಪ್ಪ ಗಡಿಭಾಗ ಗೇಟ್ ಬಳಿ ಸಂಜೆ ನಡೆದ ಕಾರ್ಯಾಚರಣೆಯಿಂದ ಸಾಲುಗಟ್ಟಿ ನಿಂತ ವಾಹನಗಳ ದೃಶ್ಯ ಕಂಡುಬಂತು

ಪೆÇಲೀಸರ ಕೈಯಲ್ಲಿ ಲಾಠಿ ಕಂಡು ಬೆದರಿದ ಸವಾರರು, ಪಾದಚಾರಿಗಳು ಬಂದ ದಾರಿಯಲ್ಲೇ ವಾಪಸ್ ತೆರಳಿದರು.

ಅಗತ್ಯ ವಸ್ತುಗಳ ಸಾಗಾಟ, ತುರ್ತು ಪರಿಸ್ಥಿತಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿ ಉಳಿದವರ ವಿರುದ್ಧ ಪೆÇಲೀಸರು ಕಟ್ಟಿನಿಟ್ಟಿನ ಕ್ರಮದ ಮೂಲಕ ಸಂಚಾರಕ್ಕೆ ನಿಬರ್ಂಧ ವಿಧಿಸಿದರು.