ಮಡಿಕೇರಿ, ಜು. 16: ಜಿಲ್ಲೆಯಲ್ಲಿ ತಾ. 16ರಂದು 13 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 94 ಆಗಿದೆ. ಒಟ್ಟು 141 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಗೊಂಡಿರುತ್ತಾರೆ. ಪ್ರಸ್ತುತ ಜಿಲ್ಲೆಯಲ್ಲಿ 101 ನಿಯಂತ್ರಿತ ಪ್ರದೇಶಗಳಿವೆ. ಒಟ್ಟು 4 ಮಂದಿ ಸಾವನ್ನಪ್ಪಿದ್ದಾರೆ.13 ಪ್ರಕರಣಗಳ ವಿವರ 23 ವಷರ್Àದ ಮಹಿಳೆ, 58 ವಷರ್Àದ ಮಹಿಳೆ, 63 ವಷರ್Àದ ಮಹಿಳೆ ಮತ್ತು 57 ವಷರ್Àದ ಪುರುಷ, ಅಚ್ಚಪ್ಪ ಲೇಔಟ್ ಗೋಣಿಕೊಪ್ಪದಲ್ಲಿನ ಪ್ರಕರಣದ ಪ್ರಾಥಮಿಕ ಸಂಪರ್ಕಗಳು. 55 ವಷರ್Àದ ಮಹಿಳೆ, 28 ವಷರ್Àದ ಮಹಿಳೆ ಮತ್ತು 3 ವಷರ್Àದ ಗಂಡು ಮಗು, ಎಮ್ಮೆಗುಂಡಿ ರಸ್ತೆ ಸುಂಟಿಕೊಪ್ಪದಲ್ಲಿನ ಪ್ರಕರಣದ ಪ್ರಾಥಮಿಕ ಸಂಪರ್ಕಗಳು. 20 ವಷರ್Àದ ಮಹಿಳೆ, ಲಕ್ಕುಂದ ವೀರಾಜಪೇಟೆ ತಾಲೂಕಿನಲ್ಲಿ ವರದಿಯಾದ ಪ್ರಕರಣದ ಪ್ರಾಥಮಿಕ ಸಂಪರ್ಕ.64 ವಷರ್À ವಯಸ್ಸಿನ ಮಹಿಳೆ, ಮೈಸೂರಿನ ‘ಪಾಸಿಟಿವ್’ ಪ್ರಕರಣದ ಪ್ರಾಥಮಿಕ ಸಂಪರ್ಕ ಹೊಂದಿದ ಇವರು ಕುಶಾಲನಗರ ಬೈಚನಹಳ್ಳಿಯ ಡೀಸೆಲ್ ಕೇರ್ ಎದುರು ವಾಸಿಸುತ್ತಿದ್ದರು, 21 ವಷರ್À ವಯಸ್ಸಿನ ಪುರುಷ ದೇಚೂರಿನ ಗಣಪತಿ ದೇವಸ್ಥಾನದ ಬಳಿ, 26 ವಷರ್Àದ ಪುರುಷ, ಅಪ್ಪಯ್ಯ ಸ್ವಾಮಿ ರಸ್ತೆ ವೀರಾಜಪೇಟೆಯ ನಿವಾಸಿ ಬೆಂಗಳೂರಿನಿಂದ ಹಿಂತಿರುಗಿದ್ದರು.

ಅರ್ವತ್ತೋಕ್ಲುವಿನ ವಿದ್ಯಾನಿಕೇತನ್ ರಸ್ತೆಯ, 39 ವಷರ್Àದ ಮಹಿಳೆ, ಆರೋಗ್ಯ ಕಾರ್ಯಕರ್ತೆ ಹಾಗೂ ಅವರ 43 ವರ್ಷದ ಪತಿಗೆ ಸೋಂಕು ದೃಢಪಟ್ಟಿದೆ.

ಹೊಸ ನಿಯಂತ್ರಿತ ಪ್ರದೇಶಗಳು

ಡೀಸೆಲ್ ಕೇರ್ ಎದುರು, ಬೈಚನಹಳ್ಳಿ ಕುಶಾಲನಗರ, ಗಣಪತಿ ದೇವಾಲಯದ ಹತ್ತಿರ ದೇಚೂರು ಮಡಿಕೇರಿ, ಅಪ್ಪಯ್ಯ ಸ್ವಾಮಿ ರಸ್ತೆ ವೀರಾಜಪೇಟೆ, ವಿದ್ಯಾನಿಕೇತನ್ ರಸ್ತೆ ಅರ್ವತ್ತೋಕ್ಲು. ಈ 4 ಪ್ರದೇಶಗಳಲ್ಲಿ ಕಂಟೈನ್‍ಮೆಂಟ್ ವಲಯ ತೆರೆಯಲಾಗಿದೆ.

ಡೈರಿ ಫಾರ್ಮ್ ಮಡಿಕೇರಿ ಮತ್ತು ಕೆಇಬಿ ರಸ್ತೆ ಗೋಣಿಕೊಪ್ಪ ಈ ಎರಡು ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.