ಮಡಿಕೇರಿ, ಜು. 16: 2020-21ನೇ ಸಾಲಿನ ಮಡಿಕೇರಿ ಲಯನ್ಸ್ ಸಂಸ್ಥೆಯ 56ನೇ ಅಧ್ಯಕ್ಷರಾಗಿ ಲಯನ್ ಅನಿತಾ ಸೋಮಣ್ಣ, ಕಾರ್ಯದರ್ಶಿಗಳಾಗಿ ಲಯನ್ ಕವಿತಾ ಕಾವೇರಮ್ಮ, ಖಜಾಂಚಿಯಾಗಿ ಲಯನ್ ಕಮಲಾ ಮುರುಗೇಶ್ ಅವರು ಆಯ್ಕೆಯಾಗಿದ್ದಾರೆ. ತಾ. 22 ರಂದು ಪೂರ್ವಾಹ್ನ ಲಯನ್ಸ್ ಸಭಾಂಗಣದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದ್ದು, ಲಯನ್ ಪಿ.ಪಿ. ಸೋಮಣ್ಣ, ಮಾಜಿ ಪ್ರಾಂತೀಯ ಅಧ್ಯಕ್ಷರು ಪ್ರತಿಜ್ಞಾ ಬೋಧನೆ ನೀಡಲಿದ್ದಾರೆ.