ಕುಟ್ಟ, ಜು. 16: ಕುಟ್ಟ ವಿಎಸ್‍ಎಸ್‍ಎನ್ ಬ್ಯಾಂಕ್ ಸಭಾಂಗಣದಲ್ಲಿ ಅಧ್ಯಕ್ಷ ಗುಡಿಯಂಗಡ ಪೂವಪ್ಪ ಅವರ ಸಮ್ಮುಖದಲ್ಲಿ ರೈತ ಸಂಘದ ಸಭೆ ನಡೆಯಿತು. ಸಭೆಯಲ್ಲಿ ಕಾನೂರು, ಕುಟ್ಟ ರಸ್ತೆ ಬಗ್ಗೆ, ಆನೆ ಹಾವಳಿ ಬಗ್ಗೆ ಸೇರಿದಂತೆ ಹಲವಾರು ವಿಷಯದ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ನಾಲ್ಕೇರಿ, ಬಾಡಗ, ಕುಟ್ಟ ರೈತ ಮುಖಂಡರು ಹಾಗೂ ಸದಸ್ಯರು ಭಾಗವಹಿಸಿದ್ದರು.