ವೀರಾಜಪೇಟೆ, ಜು. 15: ವೀರಾಜಪೇಟೆಯಲ್ಲಿ ಸಂತೆ ರದ್ದುಗೊಂಡಿದ್ದರಿಂದ ಇಂದು ಬೆಳಗ್ಗಿನಿಂದಲೇ ಇಲ್ಲಿನ ಮುಖ್ಯ ರಸ್ತೆ, ಖಾಸಗಿ ಬಸ್ಸು ನಿಲ್ದಾಣ ಆಜು ಬಾಜಿನಲ್ಲಿ ವಾಹನ ಹಾಗೂ ಜನ ಸಂಚಾರ ಕ್ಷೀಣಗೊಂಡಿತ್ತು. ಈ ವಿಭಾಗದಲ್ಲಿ ಬೆಳಗ್ಗಿನಿಂದಲೇ ಮಳೆ ಸುರಿಯುತ್ತಿದ್ದುದು ಜನ ಸಂಚಾರ ಕಡಿಮೆಯಾಗಲು ಕಾರಣವಾಗಿತ್ತು.

ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಮಾರುಕಟ್ಟೆಯಲ್ಲಿ ಎಂದಿನಂತೆ ಜನರು ತರಕಾರಿ ಇತರ ಸಾಮಗ್ರಿಗಳನ್ನು ಖರೀದಿಸುತ್ತಿದ್ದುದು ಕಂಡುಬಂತು. ಮಾರ್ಜಿನ್ ಫ್ರಿ ವiಳಿಗೆಗಳಿಗೆ ಷರತ್ತು ಬದ್ಧವಾಗಿ ಸ್ಯಾನಿಟೈಸರ್‍ನಿಂದ ಕೈ ಶುಚಿಗೊಳಿಸಿ ಮಾಸ್ಕ್ ಧರಿಸಿ ಸರದಿ ಪ್ರಕಾರ ಒಳಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಕೊರೊನಾ ವೈರಸ್ ನಿರ್ಬಂಧದ ಹಿನೆÀ್ನಲೆಯಲ್ಲಿ ಇಂದು ಸಂತೆ ರದ್ದುಗೊಂಡಿದ್ದರೂ ಫುಟ್‍ಪಾತ್ ವ್ಯಾಪಾರಿಗಳು ಖಾಸಗಿ ಬಸ್ಸು ನಿಲ್ದಾಣದ ಸುತ್ತ ಮುತ್ತ, ಸಮೀಪವಿರುವ ಮುಖ್ಯ ರಸ್ತೆಯ ಬದಿಯಲ್ಲಿ ವ್ಯಾಪಾರ ನಡೆಸಿದರು. ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಗ್ರಾಮಾಂತರ ಪ್ರದೇಶದ ಜನರು ಪಟ್ಟಣಕ್ಕೆ ಬರುತ್ತಿಲ್ಲ. ಜೊತೆಗೆ ಖಾಸಗಿ ಬಸ್ಸುಗಳ ಸಂಚಾರವಿಲ್ಲದಿರುವುದು ಪಟ್ಟಣದಲ್ಲಿ ಜನ ಸಂಚಾರ ಕ್ಷೀಣಕ್ಕೆ ಕಾರಣವಾಗಿತ್ತು.