ಸುಂಟಿಕೊಪ್ಪ, ಜು. 15: ಸುಂಟಿಕೊಪ್ಪ ಚೇಂಬರ್ ಆಫ್‍ಕಾಮರ್ಸ್ ಸ್ಥಾನೀಯ ಸಮಿತಿ ವತಿಯಿಂದ ತಾ. 15 ರಿಂದ 17ರವರೆಗೆ ಬೆಳಿಗ್ಗೆ 6 ರಿಂದ 12ರ ವರೆಗೆ ವ್ಯಾಪಾರ ವಹಿವಾಟು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಮೊದಲೆ ಕೊರೊನಾ ಭೀತಿಯಿಂದ ವ್ಯಾಪಾರ ವಹಿವಾಟು ಕುಸಿದಿದ್ದು ವ್ಯಾಪಾರಸ್ಥರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೆ ವ್ಯಾಪಾರ ವಹಿವಾಟು ನಡೆಸಲು ಅನುವು ಮಾಡಿಕೊಡಲಾಗಿತ್ತು. ಅದರಂತೆ ದಿನಸಿ, ತರಕಾರಿ ಇತರ ಅಂಗಡಿಗಳವರು ವ್ಯಾಪಾರ ವಹಿವಾಟು ನಡೆಸಿ, ಮಧ್ಯಾಹ್ನದನಂತರ ಮುಚ್ಚಿದರು. ಆದರೆ ಕುರಿ, ಕೋಳಿ, ಹಂದಿ ವ್ಯಾಪಾರಸ್ಥರು ವ್ಯಾಪಾರ ಕ್ಷೀಣಿಸಿದ್ದರಿಂದ ಸಂಜೆಯವರೆಗೆ ಅಂಗಡಿಯನ್ನು ತೆರೆದಿದ್ದರು.

ಈ ಮೊದಲೇ ವಿವಿಧ ಸಂಘ ಸಂಸ್ಥೆಯವರು ವ್ಯಾಪಾರ ವಹಿವಾಟು ಬಂದ್ ಎಂದು ಘೋಷಣೆ ಮಾಡಿದ್ದರಿಂದ ಜನರ ಓಡಾಟ ತೀರಾ ವಿರಳವಾಗಿತ್ತು.