ಶನಿವಾರಸಂತೆ, ಜು. 15: ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಯಿಂದ 7ರವರೆಗೆ ಡಾ. ಅಂಬೇಡ್ಕರ್ ಜೀವನ ಆಧಾರಿತ ಮಹಾನಾಯಕ ಡಾ. ಅಂಬೇಡ್ಕರ್ ಧಾರಾವಾಹಿ ಪ್ರಸಾರವಾಗುತ್ತಿದ್ದು, ಆ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಕೊಡ್ಲಿಪೇಟೆ ದಲಿತ ಮುಖಂಡರು ಸೆಸ್ಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.