ನಾಪೆÇೀಕ್ಲು, ಜು. 15 : ಪಿ.ಯು.ಸಿ. ಫÀಲಿತಾಂಶ ಪ್ರಕಟಗೊಂಡಿದ್ದು ಕೊಡಗಿನ ಕುವರ ಎ.ಎ. ಲೀಶನ್ ಮುತ್ತಪ್ಪ ವಿಜ್ಞಾನ ವಿಭಾಗದಲ್ಲಿ 600ಕ್ಕೆ 592 ಅಂಕಗಳಿಸಿ ರಾಜ್ಯಕ್ಕೆ 5 ನೇ ರ್ಯಾಂಕ್‍ಗಳಿಸಿದ್ದಾನೆ. ಕನ್ನಡದಲ್ಲಿ 99, ಇಂಗ್ಲೀಷ್‍ನಲ್ಲಿ 96, ಗಣಿತದಲ್ಲಿ 100, ಜೀವಶಾಸ್ತ್ರದಲ್ಲಿ 99, ರಾಸಾಯನಿಕ ಶಾಸ್ತ್ರ 99, ಭೌತಶಾಸ್ತ್ರದಲ್ಲಿ 99. (ಪಿ.ಸಿ.ಎಂ.ಬಿ. ) ಅಂಕ ಗಳಿಸಿರುತ್ತಾನೆ. ಮಂಗಳೂರಿನ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಶಾಲೆಗೂ ಮತ್ತು ಜಿಲ್ಲೆಗೂ ಕೀರ್ತಿಯನ್ನು ತಂದಿದ್ದಾನೆ. ಮುಂದೆ ಎಂ.ಬಿ.ಬಿ.ಎಸ್ ಮಾಡುವ ಇಂಗಿತವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದು ಈತ ಭಾಗಮಂಡಲ ತಾವೂರು ಗ್ರಾಮದ ಅಯ್ಯಣೀರ ರವಿ ಅಪ್ಪಣ್ಣ ಮತ್ತು ಭವ್ಯ ಮಾಯಮ್ಮ ದಂಪತಿಯ ಪುತ್ರನಾಗಿರುತ್ತಾನೆ.