ಸುಂಟಿಕೊಪ್ಪ, ಜು. 14: ಸುಂಟಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಸಭೆಯನ್ನು ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸ್ಥಾನೀಯ ಸಮಿತಿ ಅಧ್ಯಕ್ಷ ಡಿ. ನರಸಿಂಹ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸುಂಟಿಕೊಪ್ಪ ವರ್ತಕರ ಮನವಿಯ ಮೇರೆಗೆ ಬುಧವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವ್ಯಾಪಾರ ನಡೆಸಿ ಮಧ್ಯಾಹ್ನದ ನಂತರ ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಲಾಯಿತು. ಈಗಾಗಲೇ ವ್ಯಾಪಾರಸ್ಥರ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು ಈ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಗಂಗಾಧರ ರೈ, ಖಜಾಂಚಿ ಸತೀಶ್ ಶೇಟ್, ಸಮಿತಿ ಸದಸ್ಯರಾದ ಎಂ.ಎ. ವಸಂತ, ವಿ.ಆರ್. ಸಂತೋಷ್, ಟಿ.ಕೆ. ರಾಜೀವ್, ಜಗದೀಶ್ ರೈ ಹಾಗೂ ರಾಜು ರೈ ಉಪಸ್ಥಿತರಿದ್ದರು.