ಸುಂಟಿಕೊಪ್ಪ, ಜು. 13: ಸುಂಟಿಕೊಪ್ಪ ಪಟ್ಟಣದ 1ನೇ ವಿಭಾಗದ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ಗಂಟಲು ದ್ರವ ಪರೀಕ್ಷೆಯ ಮೂಲಕ ದೃಢಪಟ್ಟಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಒಳಪಟ್ಟಿದ್ದಾರೆ.
ಸುಂಟಿಕೊಪ್ಪ ಎಮ್ಮೆಗುಂಡಿ ರಸ್ತೆಯ 1ನೇ ವಿಭಾಗದ ಶಿವರಾಂರೈ ಬಡಾವಣೆಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಜಿಲ್ಲಾಡಳಿತ ವತಿಯಿಂದ ತಹಶೀಲ್ದಾರ್ ಗೋವಿಂದರಾಜು, ಕಂದಾಯ ಪರಿವೀಕ್ಷಕ ಶಿವಪ್ಪ, ಆರೋಗ್ಯ ಸಹಾಯಕ ಚಂದ್ರೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಠಾಣಾಧಿಕಾರಿ ತಿಮ್ಮಪ್ಪ ಹಾಗೂ ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ, ಪಂಚಾಯಿತಿ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಬಡಾವಣೆಗೆ ತೆರಳಿ ಸೋಂಕು ತಗುಲಿದ ಮನೆಯವರಿಗೆ ಧೈರ್ಯ ತುಂಬಿ ಬಡಾವಣೆಗೆ ಸ್ಯಾನಿಟೈಸರ್‍ಗೊಳಿಸಿ ಸರಕಾರದಿಂದ ಚಿಕಿತ್ಸೆ ಇನ್ನಿತರ ನೆರವನ್ನು ನೀಡಲಾಗುವುದು ಮನೆಯಲ್ಲಿ ಯಾವುದೇ ಸಮಸ್ಯೆಗಳು ಉದ್ಬವಿಸಿದ್ದಲ್ಲಿ ಮಾಹಿತಿ ನೀಡುವಂತೆ ಪಂಚಾಯಿತಿ, ಆರೋಗ್ಯ ಇಲಾಖೆಗಳಿಂದ ನೆರವು ನೀಡಲಾಗುವುದು ಎಂದು ಹೇಳಿದರು. ಮನೆಯವರು ಮುಂಜಾಗ್ರತೆಯಿಂದ ಇರುವಂತೆ ಸೂಚಿಸಿದರು.
ಶಿವರಾಂರೈ ಬಡಾವಣೆಯ 42 ಮನೆಗಳನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಸೀಲ್‍ಡೌನ್ ಮಾಡಲಾಯಿತು. ಹೊರಗಿನಿಂದ ಯಾರೂ ಒಳಗೆ ತೆರಳಬಾರದು ಎಂದು ಸೂಚಿಸಲಾಯಿತು.