ಕೂಡಿಗೆ, ಜು. 14: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮ ವ್ಯಾಪ್ತಿಯ ಉಪ ಗ್ರಾಮವಾದ ಉಳಗಲಿಯ ಮನೆಗಳಿಗೆ ಹೋಗಲು ಸಮರ್ಪಕವಾದ. ರಸ್ತೆ ಇಲ್ಲ. ಅಲ್ಲದೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಈ ಭಾಗದ ಗ್ರಾಮಸ್ಥರ ಆಗ್ರಹವಾಗಿದೆ

ಈ ವ್ಯಾಪ್ತಿಯ ಕೆಲ ವಸತಿ ರಹಿತರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಇವರುಗಳಿಗೆ ಅನುಕೂಲವಾಗುವಂತೆ ನೀರಿನ ಸೌಲಭ್ಯ ಮತ್ತು ರಸ್ತೆಯ ವ್ಯವಸ್ಥೆ ಕಲ್ಪಿಸುವಂತೆ ಈ ಭಾಗ ನಿವಾಸಿಗಳು ಒತ್ತಾಯಿಸಿದ್ದಾರೆ.