ಪೆÇನ್ನಂಪೇಟೆ, ಜು. 13: ಪೆÇನ್ನಂಪೇಟೆಯ ಇಗ್ಗುತಪ್ಪ ಕೋ ಆಪರೇಟಿವ್ ಸೊಸೈಟಿ ವತಿಯಿಂದ ನಡೆದಿತ್ತು ಎನ್ನಲಾದ ಕೋವಿಡ್ ವಾರಿಯರ್ಸ್ ಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೋಣಿಕೊಪ್ಪಲಿನ ಆರೋಗ್ಯ ಕಾರ್ಯಕರ್ತರೊಬ್ಬರಲ್ಲಿ ಮಾತ್ರ ಕೋವಿಡ್ ವೈರಾಣು ಪತ್ತೆಯಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದ ಕೋ ಆಪರೇಟಿವ್ ಬ್ಯಾಂಕಿನ ಸಿಬ್ಬಂದಿ, ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೋಗ್ಯ ಸಹಾಯಕರುಗಳನ್ನು ಮುಂಜಾಗೃತ ಕ್ರಮವಾಗಿ ಈಗಾಗಲೇ ಗೃಹ ದಿಗ್ಬಂಧನಕ್ಕೆ ಒಳಪಡಿಸಲಾಗಿದೆ. ಅವರುಗಳಲ್ಲಿ ಕೋವಿಡ್ ವೈರಾಣು ಪತ್ತೆಯಾಗಿರುವುದಿಲ್ಲ. ಈ ಭಾಗದ ರಸ್ತೆಯನ್ನು ಕೂಡ ಮುಚ್ಚಲಾಗಿದ್ದು, ಜನರ ಓಡಾಟಕ್ಕೆ ನಿರ್ಬಂಧ ಹಾಕಲಾಗಿದೆ. ಗ್ರಾಮಸ್ಥರು ಯಾವುದೇ ಊಹಾಪೆÇೀಹಗಳಿಗೆ ಕಿವಿಗೊಟ್ಟು ಗೊಂದಲಕ್ಕೆ ಒಳಗಾಗಬಾರದೆಂದು ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ಪ್ರಕಟಣೆ ತಿಳಿಸಿದೆ.