ಮಡಿಕೇರಿ, ಜು.13: ಕಳೆದ 2019-2020ರ ಸಾಲಿನಲ್ಲಿ ಅISಅಇ ಬೋರ್ಡ್ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ನಡೆಸಿದ 10 ಮತ್ತು ಹನ್ನೆರಡನೇ ತರಗತಿಯ ಫಲಿತಾಂಶವು ಹೊರಬಿದ್ದಿದ್ದು, ಗೋಣಿಕೊಪ್ಪಲಿನ ಕಾಲ್ಸ್ ಶಾಲೆಯ ವಿದ್ಯಾರ್ಥಿಗಳು ಈ ಎರಡೂ ವಿಭಾಗದಲ್ಲಿಯೂ ಶೇ.100ರ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ 10ನೇ ತರಗತಿಯಲ್ಲಿ ಸತತ 100ರ ಫಲಿತಾಂಶವನ್ನು ಕಾಯ್ದುಕೊಂಡು ಬಂದಿದೆ.

ಹತ್ತನೇ ತರಗತಿಯ ವಿಜ್ಞಾನ ವಿಭಾಗದಲ್ಲಿ ರಾಜೇಶ್ವರಿ ಎಂ.ಜಿ. ಶೇ.97 ಅಂಕಗಳನ್ನು ಗಳಿಸಿ ಪ್ರಥಮ, ವಾಣಿಜ್ಯ ವಿಭಾಗದಲ್ಲಿ ಹರ್ಷಿಲ್. ಕಾವೇರಿ ಶೇ.95 ಅಂಕದೊಂದಿಗೆ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾರೆ.

ಒಟ್ಟು ಪರೀಕ್ಷೆಗೆ ಹಾಜರಾದ 78 ವಿದ್ಯಾರ್ಥಿಗಳಲ್ಲಿ ಡಿಸ್ಟಿಂಕ್ಷನ್‍ನಲ್ಲಿ ಪಾಸಾದ 70, ಪ್ರಥಮ ಶ್ರೇಣಿಯಲ್ಲಿ 8 ಮಂದಿ ಉತ್ತೀರ್ಣರಾಗಿದ್ದಾರೆ.

ಇಂಗ್ಲೀಷ್ ಸಾಹಿತ್ಯದಲ್ಲಿ 3, ಇತಿಹಾಸದಲ್ಲಿ 6, ಜೀವಶಾಸ್ತ್ರದಲ್ಲಿ 8, ಭೂಗೋಳ ಶಾಸ್ತ್ರದಲ್ಲಿ 2, ಗಣಿತದಲ್ಲಿ 1, ಕಂಪ್ಯೂಟರ್ ಸೈನ್ಸ್‍ನಲ್ಲಿ 4 ಹಾಗೂ ದೈಹಿಕ ಶಿಕ್ಷಣದಲ್ಲಿ 8 ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಅಂಕಗಳನ್ನು ಗಳಿಸಿರುತ್ತಾರೆ.

12ನೇ ತರಗತಿಯ ISಅ ಪರೀಕ್ಷೆಗೆ ಹಾಜರಾದ 36 ವಿದ್ಯಾರ್ಥಿಗಳಲ್ಲಿ ಡಿಸ್ಟಿಂಕ್ಷನ್‍ನಲ್ಲಿ 30, ಪ್ರಥಮ ಶ್ರೇಣಿಯಲ್ಲಿ 6 ಮಂದಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮಾಸ್ಟರ್ ರಶಿಲ್ ಮ್ಯಾಥ್ಯು ಶೇ.95ರಷ್ಟು ಅಂಕಗಳಿಸಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರೆ, ವಾಣಿಜ್ಯ ವಿಭಾಗದಲ್ಲಿ ಸಂಜನ ಗಿರೀಶ್ ಮತ್ತು ಆಂಚಲ್ ಅಯ್ಯಪ್ಪ ಶೇ.94ರಷ್ಟು ಅಂಕಗಳಿಸಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.