ಮಡಿಕೇರಿ, ಜು. 14: ಜಿಲ್ಲೆಯಲ್ಲಿ ತಾ.14 ರಂದು ಹೊಸದಾಗಿ 33 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ಈವರೆಗೆ ಒಟ್ಟು 217 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 87 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿರುತ್ತಾರೆ. 3 ಮಂದಿ ಮೃತಪಟ್ಟಿದ್ದು 127 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಪ್ರಸ್ತುತ 95 ನಿಯಂತ್ರಿತ ಪ್ರದೇಶಗಳಿವೆ.

33 ಪ್ರಕರಣಗಳ ವಿವರಮಡಿಕೇರಿ ನಗರದ ಐ.ಟಿ.ಐ ಜಂಕ್ಷನ್ ಬಳಿ ವಾಸವಿರುವ ಬಾಗಲಕೋಟೆ ಪ್ರಯಾಣದ ಇತಿಹಾಸ ಇರುವ ಪೆÇಲೀಸ್ ಇಲಾಖೆಯ 32 ವರ್ಷದ ಪುರುಷ, ಪುಟಾಣಿ ನಗರದ ನಿವಾಸಿ ಮಂಗಳೂರಿನಿಂದ ಹಿಂದಿರುಗಿದ್ದ 54 ವರ್ಷದ ಪುರುಷ, ಮಹದೇವ ಪೇಟೆಯ (ರವಿ ಪ್ರೆಸ್ ಮಿಲ್ ಹತ್ತಿರ) ನಿವಾಸಿಯಾದ ಜ್ವರದ ಲಕ್ಷಣವಿದ್ದ 52 ವರ್ಷದ ಪುರುಷ, ರಾಣಿಪೇಟೆಯ ಜ್ವರದ ಲಕ್ಷಣವಿದ್ದ 38 ವರ್ಷದ ಪುರುಷ, ತಾಳತ್ತಮನೆಯ ಜ್ವರದ ಲಕ್ಷಣವಿದ್ದ 34 ವರ್ಷದ ಪುರುಷ, ಈ ಹಿಂದೆ ಸೋಂಕು ದೃಢಪಟ್ಟಿದ್ದ ಗದ್ದುಗೆಯ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ 22 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.

ವೀರಾಜಪೇಟೆ

ಗೋಣಿಕೊಪ್ಪದ ಹೆಚ್.ಸಿ. ಪುರದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 37 ವರ್ಷದ ಪುರುಷ ಹಾಗೂ ಜ್ವರದ ಲಕ್ಷಣವಿದ್ದ 43 ವರ್ಷದ ಪುರುಷ, ಕರಡಿಗೋಡು ನಿವಾಸಿ ಕೇರಳದ ಕಣ್ಣೂರು ಪ್ರಯಾಣದ ಇತಿಹಾಸವಿರುವ 56 ವರ್ಷದ ಪುರುಷ, 1ನೇ ರುದ್ರಗುಪ್ಪೆ (ತೋತೇರಿ) ನಿವಾಸಿ ಬೆಂಗಳೂರಿನಿಂದ ಹಿಂದಿರುಗಿದ್ದ 38 ವರ್ಷದ ಪುರುಷ, ಹಳೆ ಸಿದ್ದಾಪುರದ ಹೆಚ್.ಎಸ್ ರಸ್ತೆಯ 70 ವರ್ಷದ ಪುರುಷ ಮತ್ತು 43 ವರ್ಷದ ಮಹಿಳೆ, ಅಂತರ್ ರಾಜ್ಯ ಪ್ರಯಾಣದ

(ಮೊದಲ ಪುಟದಿಂದ) ಇತಿಹಾಸವಿರುವ ಸಿದ್ದಾಪುರದ ಎಂ.ಜಿ ರಸ್ತೆಯ ನಿವಾಸಿಯಾದ 47 ವರ್ಷದ ಮಹಿಳೆ, ಪೆÇನ್ನಂಪೇಟೆಯ ಹುದಿಕೇರಿ ರಸ್ತೆಯ ಮುಗುಟಗೇರಿ ನಿವಾಸಿಯಾದ 42 ವರ್ಷದ ಪುರುಷ, ಈ ಹಿಂದೆ ಕೋವಿಡ್ ಸೋಂಕು ದೃಢಪಟ್ಟ ಹುಂಡಿ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿಗಳಾದ ಹುಂಡಿ ಗ್ರಾಮದ, ಪ್ರಸ್ತುತ ವೀರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲದಲ್ಲಿ ನೆಲೆಸಿರುವ 10 ವರ್ಷದ ಬಾಲಕ, 15 ವರ್ಷದ ಬಾಲಕ ಮತ್ತು 33 ವರ್ಷದ ಮಹಿಳೆ, ಈ ಹಿಂದೆ ಸೋಂಕು ದೃಢಪಟ್ಟ ಅಚ್ಚಪ್ಪ ಲೇ ಔಟ್‍ನ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 43 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಸೋಮವಾರಪೇಟೆ

ನೆಲ್ಲಿಹುದಿಕೇರಿ, ಮಾದಪ್ಪ ಕಾಲೋನಿ ನಿವಾಸಿ 58 ವರ್ಷದ ಮಹಿಳೆ ಆರೋಗ್ಯ ಕಾರ್ಯಕತೆರ್À, ಕುಶಾಲನಗರದ ದಂಡಿನಪೇಟೆಯ (ಕುಸುಮ ಸ್ಟೋರ್ ಬಳಿ) ನಿವಾಸಿ, ಜ್ವರ ಲಕ್ಷಣಗಳಿದ್ದ 22 ವರ್ಷದ ಮಹಿಳೆ ಹಾಗೂ ರೋಟರಿ ಹಾಲ್ ಬಳಿಯ ನಿವಾಸಿ, 48 ವರ್ಷದ ಮಹಿಳೆ ಆರೋಗ್ಯ ಕಾರ್ಯಕತೆರ್À, ಕುಶಾಲನಗರದ ಕೂಡ್ಲೂರು ನಿವಾಸಿ ಉಜೈನ್‍ನಿಂದ ಹಿಂದಿರುಗಿದ್ದ 18 ವರ್ಷದ ಹುಡುಗ, ಕುಶಾಲನಗರದ ತೊರೆನೂರು ನಿವಾಸಿಗಳಾದ ಬೆಂಗಳೂರಿನಿಂದ ಹಿಂದಿರುಗಿದ್ದ 25 ವರ್ಷದ ಎರಡು ಪುರುಷರಿಗೆ ಹಾಗೂ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದ ನಿವಾಸಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ 36 ವರ್ಷದ ಪುರುಷ, ಕುಶಾಲನಗರದ ಜನತಾ ಕಾಲೋನಿಯ ನಿವಾಸಿಯಾದ ಜ್ವರ ಲಕ್ಷಣಗಳಿದ್ದ 17 ವರ್ಷದ ಹುಡುಗಿ, ಅಂತರ್ ರಾಜ್ಯ ಪ್ರಯಾಣದ ಇತಿಹಾಸ ಇರುವÀ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮದ ಕೂರ್ಗ್ ಹಳ್ಳಿ ಎಸ್ಟೇಟ್‍ನಲ್ಲಿ ವಾಸವಿರುವ 20 ವರ್ಷದ ಹುಡುಗಿ, ಶನಿವಾರಸಂತೆಯ ಗುಂಡೂರಾವ್ ಬಡಾವಣೆಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 20 ವರ್ಷದ ಹುಡುಗ, ಕುಶಾಲನಗರ ಹೋಬಳಿ ತೊರೆನೂರು ಶಿರಂಗಾಲ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 17 ವರ್ಷದ ಹುಡುಗ, ಕುಶಾಲನಗರ ಹೋಬಳಿ ಶಿರಂಗಾಲ, ಸಾಲುಕೊಪ್ಪಲು ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 44 ವರ್ಷದ ಪುರುಷ, ಸುಂಟಿಕೊಪ್ಪದ ಎಮ್ಮೆಗುಂಡಿ ರಸ್ತೆಯ ಪ್ರಾಥಮಿಕ ಸಂಪರ್ಕದ 34 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.

51 ವರ್ಷದ ಪುರುಷರೊಬ್ಬರು ವಿದೇಶದಿಂದ ಮರಳಿದ್ದು, ಅವರನ್ನು ನೇರವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿರಿಯಾಪಟ್ಟಣ ತಾಲೂಕು, ಚೆನ್ನಕಲ್ ಕೊಪ್ಪ ಗ್ರಾಮದ ನಿವಾಸಿಯಾದ ಜ್ವರದ ಲಕ್ಷಣಗಳಿದ್ದ 15 ವರ್ಷದ ಹುಡುಗನಿಗೆ ಸೋಂಕು ದೃಢಪಟ್ಟಿದ್ದು, ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

ಹೊಸ ನಿಯಂತ್ರಿತ ಪ್ರದೇಶಗಳು

ಐ.ಟಿ.ಐ ಜಂಕ್ಷನ್, ಕರಡಿಗೋಡು, ಮಾದಪ್ಪ ಕಾಲೋನಿ, ದಂಡಿನಪೇಟೆ (ಕುಸುಮ ಸ್ಟೋರ್ ಬಳಿ, (ರೋಟರಿ ಹಾಲ್ ಬಳಿ), ಕೂಡ್ಲೂರು, 1ನೇ ರುದ್ರಗುಪ್ಪೆ (ತೋತೇರಿ), ಜನತಾ ಕಾಲೋನಿ, ಹೆಚ್.ಎಸ್. ರಸ್ತೆ, ಹಳೇ ಸಿದ್ದಾಪುರ, ಕೂರ್ಗ್ ಹಳ್ಳಿ ಎಸ್ಟೇಟ್, ಎಂ.ಜಿ.ರಸ್ತೆ, ಹೆಚ್.ಸಿ.ಪುರ (ಜೈ ಹಿಂದ್ ವರ್ಕ್ ಶಾಪ್), ಹುದಿಕೇರಿ ರಸ್ತೆ, ಬಾಡಗ ಬಾಣಂಗಾಲ, ಮಹದೇವಪೇಟೆ (ರವಿ ಪ್ರೆಸ್ ಮಿಲ್ ಹತ್ತಿರ), ತೊರೆನೂರು (ಗ್ರಾಮ ಪಂಚಾಯತ್ ಕಚೇರಿ ಮುಂಭಾಗ), ಸಾಲುಕೊಪ್ಪಲು ಗ್ರಾಮ, ರಾಣಿಪೇಟೆ, ತಾಳತ್ತಮನೆ. ವೀರಾಜಪೇಟೆಯ ಹುಂಡಿ ಗ್ರಾಮದಲ್ಲಿ ತೆರೆಯಲಾಗಿದ್ದ ನಿಯಂತ್ರಿತ ಪ್ರದೇಶವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.