ಮಡಿಕೇರಿ, ಜು. 14: ವೀರಾಜಪೇಟೆ ವಿಭಾಗದ ವೀರಾಜಪೇಟೆ ವಲಯ ವ್ಯಾಪ್ತಿಯಲ್ಲಿ ಅರಣ್ಯ ಮೊಕದ್ದಮೆ ಸಂಖ್ಯೆ: 19/2018-19 ದಿನಾಂಕ: 16.11.2018ಕ್ಕೆ ಸಂಬಂಧಿಸಿದಂತೆ ಯಾವುದೇ ಊರ್ಜಿತ ದಾಖಲೆಗಳಿಲ್ಲದೆ ಅರಣ್ಯ ಉತ್ಪನ್ನಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಮಾರುತಿ ಓಮ್ನಿ ವ್ಯಾನ್ ನೋಂದಣಿ ಸಂಖ್ಯೆ: ಕೆಎ-40-ಎಂ-9669 (ಎಂಜಿನ್ ಸಂಖ್ಯೆ: ಈ8ಃIಓ2201601 ಹಾಗೂ ಚಾಸಿಸ್ ಸಂಖ್ಯೆ: Sಖಿ911ಓ489766) ನ್ನು ಹಾಗೂ ಬೀಟೆ ಜಾತಿಯ 3 ನಾಟ =0.118 ಘ.ಮೀಗಳನ್ನು ಸರ್ಕಾರದ ಪರ ಅಮಾನತ್ತು ಪಡಿಸಿಕೊಂಡಿದ್ದು, ಈವರೆಗೂ ಸದರಿ ವಾಹನದ ಹಾಗೂ ಸ್ವತ್ತುಗಳ ಬಗ್ಗೆ ಯಾರಿಂದಲೂ ಹಕ್ಕು ಭಾದ್ಯತೆ ಇರುವುದಿಲ್ಲ.

ಆದ್ದರಿಂದ ಈ ವಾಹನದ ನಿಜವಾದ ಮಾಲೀಕರು ಯಾರಾದರೂ ಇದ್ದಲ್ಲಿ, ವಾಹನದ ಮಾಲೀಕತ್ವವನ್ನು ರುಜುವಾತುಪಡಿಸಲು ಸಂಪೂರ್ಣ ದಾಖಲಾತಿಗಳೊಂದಿಗೆ ನಿಗಧಿತ ಅವಧಿಯೊಳಗೆ ಅಹವಾಲುಗಳನ್ನು ಕಚೇರಿಗೆ ಸಲ್ಲಿಸಬೇಕಿದೆ. ಯಾವುದೇ ಅಹವಾಲು ಬಾರದಿದ್ದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ, 1963 ರ ವಿಧಿ 71 (ಎ)ಯಿಂದ (ಜಿ) ಪ್ರಕಾರ ಈ ವಾಹನಗಳನ್ನು ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

*ವೀರಾಜಪೇಟೆ ವಿಭಾಗ ವ್ಯಾಪ್ತಿಯಲ್ಲಿ ಹೆಬ್ಬಲಸು ಮರದ ನಾಟಗಳನ್ನು ಸಾಗಾಟ ಮಾಡುತ್ತಿದ್ದ ಟಾಟಾ ಗೂಡ್ಸ್ ಕ್ಯಾರಿಯರ್, ನೋಂದಣಿ ಸಂಖ್ಯೆ ಕೆಎ-54-1637, ಇಂಜಿನ್ ಸಂಖ್ಯೆ 697ಖಿಅ55ಈಕಿZ821557, ಚಾಸಿಸ್ ಸಂಖ್ಯೆ : ಒಂಖಿ37334497ಈ13246 ಈ ವಾಹನವನ್ನು ಸರ್ಕಾರದ ಪರ ಅಮಾನತ್ತುಪಡಿಸಿಕೊಂಡಿದ್ದು, ಈವರೆಗೂ ಸದರಿ ವಾಹನದ ಬಗ್ಗೆ ಯಾರಿಂದಲೂ ಹಕ್ಕು ಭಾದ್ಯತೆ ಇರುವುದಿಲ್ಲ.

ಆದುದರಿಂದ ವಾಹನದ ನಿಜವಾದ ಮಾಲೀಕರು ಯಾರಾದರೂ ಇದ್ದಲ್ಲಿ, ವಾಹನದ ಮಾಲೀಕತ್ವವನ್ನು ರುಜುವಾತುಪಡಿಸಲು ಸಂಪೂರ್ಣ ದಾಖಲಾತಿಗಳೊಂದಿಗೆ ನಿಗಧಿತ ಅವಧಿಯೊಳಗೆ ಅಹವಾಲುಗಳನ್ನು ಕಚೇರಿಗೆ ಸಲ್ಲಿಸಬೇಕಾಗಿದ್ದು, ಯಾವುದೇ ಅಹವಾಲು ಬಾರದಿದ್ದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ, 1963 ರ ವಿಧಿ 71 (ಎ) ಯಿಂದ (ಜಿ) ಪ್ರಕಾರ ಸದರಿ ವಾಹನವನ್ನು ಸರ್ಕಾರ ಪರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.