ಗೋಣಿಕೊಪ್ಪ ವರದಿ, ಜು. 14: ಕೆರೆಯಲ್ಲಿ ಈಜುತ್ತಿದ್ದಾಗ ಸಾವೀಗೀಡಾದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಚೆಟ್ಟಂಗಡ ಅಚಲ್ ಉತ್ತಪ್ಪನ ಫಲಿತಾಂಶದಲ್ಲಿ ತೇರ್ಗಡೆ ಎಂದು ಬಂದಿದೆ. ನೆಮ್ಮಲೆ ಗ್ರಾಮದ ಚೆಟ್ಟಂಗಡ ವಿಜು, ನಂದು ದಂಪತಿ ಪುತ್ರನಾಗಿದ್ದ ಈತ ಕಳತ್ಮಾಡು ಲಯನ್ಸ್ ಪ್ರೌಢಶಾಲೆ ವಿದ್ಯಾರ್ಥಿ. ಒಟ್ಟು 322 ಅಂಕ ಪಡೆಯುವ ಮೂಲಕ ಶೇ. 53.66 ಫಲಿತಾಂಶ ಬಂದಿದೆ.

ತಾ. 12 ರಂದು ಸ್ವಗ್ರಾಮ ನೆಮ್ಮಲೆ ಕೆರೆಯಲ್ಲಿ ಈಜುತ್ತಿದ್ದಾಗ ಆಕಸ್ಮಿಕವಾಗಿ ಮುಳುಗಿ ಸಾವಿಗೀಡಾಗಿದ್ದ. 2 ದಿನಗಳಲ್ಲಿಯೇ ಫಲಿತಾಂಶ ಬಂದಿದ್ದು, ಖುಷಿ ಹಂಚಿಕೊಳ್ಳಲು ಆತನೇ ಇಲ್ಲದಿರುವುದು ಪಾಲಕರಿಗೆ ಮತ್ತಷ್ಟು ನೋವು ತಂದಿದೆ.