ಪೆÇನ್ನಂಪೇಟೆ, ಜು. 14: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ತರಕಾರಿ ಅಂಗಡಿಯ ವರ್ತಕ ಮಾಸ್ಕ್ ಹಾಕಿಕೊಳ್ಳದೆ ತರಕಾರಿ ಮಾರಾಟ ಮಾಡುತ್ತಿದ್ದುದನ್ನು ಕಂಡ ಪೆÇನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೀರಂಡ ಕಂದ ಸುಬ್ಬಯ್ಯ ವರ್ತಕನನ್ನು ತರಾಟೆಗೆ ತೆಗೆದುಕೊಂಡರು. ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸುವಂತೆ ತಿಳಿ ಹೇಳಿದರು.

ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಕಂದ ಸುಬ್ಬಯ್ಯ, ಕೊರೊನಾ ಸೋಂಕು ಕೊಡಗಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೊರೊನಾ ವಾರಿಯರ್ಸ್‍ಗಳಂತೆ ಕಾರ್ಯನಿರ್ವಹಿಸಬೇಕು. ಅಜಾಗರೂಕತೆ ತೋರುವವರನ್ನು ಕಂಡಲ್ಲಿ ತಕ್ಷಣ ಅವರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು. ನಂದೀಶ್ವರ ಆಟೋ ಚಾಲಕರ ಸಂಘದ ಉಪ ಕಾರ್ಯದರ್ಶಿ ಚೀರಂಡ ಚಂಗಪ್ಪ ಇದ್ದರು. ತರಕಾರಿ ಮಾರಾಟ ಸಂದರ್ಭ ಸೂಕ್ತ ಮುಂಜಾಗ್ರತೆ ವಹಿಸದ ವರ್ತಕನಿಗೆ ಪೆÇನ್ನಂಪೇಟೆ ಪಿಡಿಒ ಪುಟ್ಟರಾಜು ದಂಡ ವಿಧಿಸಿ, ಎಚ್ಚರಿಕೆ ನೀಡಿದರು. - ಚನ್ನನಾಯಕ