*ಗೋಣಿಕೊಪ್ಪಲು, ಜು. 14 : ಪೊನ್ನಂಪೇಟೆ ಹಾಗೂ ತಿತಿಮತಿ ಅರಣ್ಯ ವಲಯದ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ತಾ. 16 ರಂದು ಬೆಳಿಗ್ಗೆ 9 ಗಂಟೆಯಿಂದ ಕಾಡಿಗಟ್ಟುವ ಕಾರ್ಯಾಚರಣೆ ನಡೆಯಲಿದೆ. ಹಾತೂರು, ಕೈಕೇರಿ, ಅತ್ತೂರು ಗ್ರಾಮಗಳ ಕಾಫಿ ತೋಟದಲ್ಲಿ ಅಡಗಿರುವ ಕಾಡಾನೆಗಳನ್ನು ದೇವಮ್ಮಚ್ಚಿ ಹಾಗೂ ಮಾವಕಲ್ ಮೀಸಲು ಅರಣ್ಯಕ್ಕೆ ಅಟ್ಟಲಾಗುವುದು. ಈ ಸಂದರ್ಭ ಈ ಭಾಗದ ಕಾರ್ಮಿಕರು, ಪಾದಚಾರಿಗಳು ಎಚ್ಚರದಿಂದ ಇರಬೇಕು ಎಂದು ಪೊನ್ನಂಪೇಟೆ ಆರ್‍ಎಫ್‍ಒ ಪಿ.ಎ. ತೀರ್ಥ ತಿಳಿಸಿದ್ದಾರೆ.