ನಾಪೆÇೀಕ್ಲು, ಜು. 12: ಯವಕಪಾಡಿ, ನಾಲಡಿ, ಮರಂದೋಡ ಗ್ರಾಮಗಳ ತೋಟಗಳಲ್ಲಿ ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳ ಹಿಂಡು ಕುಂಜಿಲ ಗ್ರಾಮಕ್ಕೂ ಲಗ್ಗೆಯಿಟ್ಟಿವೆ.
ಶನಿವಾರ ರಾತ್ರಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಹಿಂಬದಿಯ ಮಲ್ಮ ಬೆಟ್ಟ ತಳಭಾಗ ದಿಂದ ಆಗಮಿಸಿದ 4-5 ಕಾಡಾನೆಗಳ ಹಿಂಡು ದೇವಳದ ಸಮೀಪವಿರುವ ಹೆಬ್ಬಾರ ಸುಬ್ರಾಯ ಅವರ ಕಾಫಿ ತೋಟಕ್ಕೆ ಲಗ್ಗೆಯಿಟ್ಟಿದ್ದು, ಕಾಫಿ, ಬಾಳೆ, ಅಡಿಕೆ ಗಿಡಗಳನ್ನು ಧ್ವಂಸಗೊಳಿಸಿದೆ.
ಅರಣ್ಯ ಇಲಾಖೆ ಈ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಸಿದ್ದಾರೆ.